“ಜೋರ್ಜೀಸ್ ಸ್ಮಾರ್ಟ್ ಕ್ಲಾಸ್ ರೂಮ್” ವಿಶ್ವಕೊಂಕಣಿಕೇಂದ್ರದಲ್ಲಿ ಉದ್ಘಾಟನೆ

0
8

ಮಂಗಳೂರು ವಿಶ್ವ ಕೊಂಕಣಿ ಕೇಂದ್ರದಲ್ಲಿ, ತಾ. 21-11-2026 ರಂದು “ಜೋರ್ಜೀಸ್ ಸ್ಮಾರ್ಟ್ ಕ್ಲಾಸ್ ರೂಮ್” ಇದರ ಪ್ರವರ್ತಕರು, ಭೋದಕರು ಆದ ಅಮೆರಿಕಾದ ಪ್ರೊ.ಡಾ ಕೃಷ್ಣ ಶೆಣೈ ಇವರು ಉದ್ಘಾಟಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈ ಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈಗಿನ ಏಐ –(AI) ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಹೇಗೆ ತಮ್ಮ ಪ್ರತಿಭೆಯನ್ನು ಜೋಡಿಸಿಕೊಂಡು ಮುಂದೆ ಬರಬೇಕು ಎಂಬುವುದರ ಬಗ್ಗೆ ತಿಳುವಳಿಕೆ ನೀಡಿ ಶುಭ ಹಾರೈಸಿದರು.   

ಡಾ ಕೃಷ್ಣ ಶೆಣೈ ಇವರು ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಭಾರತೀಯ ಸಿದ್ಧಾಂತ ಹಾಗೂ ಮೌಲ್ಯಗಳನ್ನು ಪ್ರಸ್ತುತಕ್ಕೆ ಸರಿಹೊಂದಿಸಿ, ಸಮೀಕರಿಸಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹೊಸ ಹೊಸ ವಿಜ್ಞಾನ ಅವಿಷ್ಕಾರಗಳನ್ನು ತುಲನಾತ್ಮಕ ದೃಷ್ಟಿಕೋನದಲ್ಲಿ ವಿವರಿಸಿ “ಜೋರ್ಜೀಸ್ ಸ್ಮಾರ್ಟ್ ಕ್ಲಾಸ್ ರೂಮ್” ನಲ್ಲಿ ಪ್ರಾತ್ಯಕ್ಷಿಕೆಯಾಗಿ, ಪ್ರಾಯೋಗಿಕವಾಗಿ ತಿಳಿಸಿದರು.   

ಕೇಂದ್ರದ ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ಖಜಾಂಚಿ ಬಿ ಆರ್ ಭಟ್, ಸಿ ಎ ಒ. ಡಾ ಬಿ ದೇವದಾಸ ಪೈ, ಲೀಲಾ ಕೃಷ್ಣ ಶೆಣೈ ಹಾಗೂ ಮೂಲ್ಕಿಯ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.   ಲಕ್ಷ್ಮೀ ಕಿಣಿ ಪ್ರಾರ್ಥಿಸಿದರು. ಎಮ್ ಆರ್ ಕಾಮತ್ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಅಮೇರಿಕಾದ ಕೊಂಕಣಿ ಚಾರಿಟೇಬಲ್ ಫಂಡ್ ಹಾಗೂ ಪೊಸಾರ್ ಹರಿ ಶೆಣೈ ಚಾರಿಟೇಬಲ್ ಫಂಡ್ ಸಹಯೋಗದೊಂದಿಗೆ ಕಾರ್ಯಕ್ರಮವು ಒಟ್ಟು 4 ದಿವಸಗಳು ಜರುಗಲಿವೆ.