ಸಾಣೂರು ಯುವಕ ಮಂಡಲದಿಂದ ಆ.15ರಂದು ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆ

0
23

ರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ದಿನಾಂಕ 15 – 08-2026 ನೇ ಶನಿವಾರದಂದು ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬೆಳಿಗ್ಗೆ 7.45ಕ್ಕೆ ಹರ್ ಘರ್ ತಿರಂಗಾ ಅಭಿಯಾನ, 8:00 ಗಂಟೆಗೆ ಧ್ವಜಾರೋಹಣ ಮತ್ತು ಭಾರತ ಮಾತೆಗೆ ಪುಷ್ಪರ್ಚಾನೆ, 8.15ಕ್ಕೆ ಬೈಕ್ ಜಾಥಾ, 8.30 ಕ್ಕೆ ಉಪಹಾರ, 9.00 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು 1 ಇಲ್ಲಿಗೆ ಭೇಟಿ ನೀಡಿ ಸಿಹಿ ತಿಂಡಿ ವಿತರಿಸುವ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಪೋಷಕರು, ದಾನಿಗಳು, ಹಿರಿಯ ಕಿರಿಯ ಸದಸ್ಯರುಗಳು ಹಿತೈಷಿಗಳು ಸರಿಯಾದ ಸಮಯಕ್ಕಿಂತ 5 ನಿಮಿಷ ಮುಂಚಿತ ಭಾಗವಹಿಸಿ ಎಲ್ಲಾ ಕಾರ್ಯಕ್ರಮಗಳನ್ನು ಯಶಶ್ವಿಗೊಳಿಸಬೇಕೆಂದು ಯುವಕ ಮಂಡಲದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.