ಹಾವಂಜೆ : 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಾವಂಜೆ ಗ್ರಾಮದ ಇಬ್ಬರು ಲೈನ್‌ಮ್ಯಾನ್‌ಗಳು ಹಾಗೂ ಓರ್ವ ಪೋಸ್ಟ್‌ಮ್ಯಾನ್ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಗುವುದು.
ಆಗಸ್ಟ್ 15ರಂದು ಕೀಳಂಜೆ ಶ್ರೀ ನಂದಿಕೇಶ್ವರ ದೇವಸ್ಥಾನದ ವಠಾರದಲ್ಲಿ ಧ್ವಜಾರೋಹಣ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸನ್ಮಾನಿತರಾಗಿ ಹಾವಂಜೆ ಗ್ರಾಮದ ಹಿರಿಯ ಲೈನ್‌ಮ್ಯಾನ್ ಸೂರ್ಯ ನಾಯ್ಕ್ ಮಂದರ್ತಿ, ಲೈನ್‌ಮ್ಯಾನ್ ಪ್ರಭು ಈರಪ್ಪ ಕುದರಿ ಹಾಗೂ ಹಾವಂಜೆ ಗ್ರಾಮದ ಪೋಸ್ಟ್‌ಮ್ಯಾನ್ ಶಿವಕುಮಾರ್ (ಜಿ.ಡಿ.) ಅವರನ್ನು ಗೌರವಿಸಲಾಗುವುದು.
ಸೂರ್ಯ ನಾಯ್ಕ್ ಅವರು ಬ್ರಹ್ಮಾವರ ಮೆಸ್ಕಾಂ ಶಾಖೆಯಲ್ಲಿ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ತಮ್ಮ ಸುದೀರ್ಘ ಸೇವಾವಧಿಯಲ್ಲಿ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇವರೊಂದಿಗೆ ಪ್ರಭು ಈರಪ್ಪ ಕುದರಿ ಹಾಗೂ ಶಿವಕುಮಾರ್ ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ತ್ರಿವರ್ಣ ವಿಶ್ವ ವೇದಿಕೆ (ರಿ.), ಕೀಳಂಜೆ ಹಾಗೂ ಶ್ರೀ ಬೊಬ್ಬರಿಯ ಮತ್ತು ಪರಿವಾರ ಹಾಗೂ ಶ್ರೀ ನಂದಿಕೇಶ್ವರ ದೈವಸ್ಥಾನ ಅಭಿವೃದ್ಧಿ ಸಮಿತಿ ಇವರ ವತಿಯಿಂದ ಸಾರ್ವಜನಿಕರ ಸಮ್ಮುಖದಲ್ಲಿ ಧ್ವಜಾರೋಹಣ ಮತ್ತು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಗ್ರಾಮದ ಸರ್ಕಾರಿ ನೌಕರರ ಸೇವೆಯನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ, ಸ್ಥಾಪಕ ಅಧ್ಯಕ್ಷರು, ತ್ರಿವರ್ಣ ವಿಶ್ವ ವೇದಿಕೆ ಹಾಗೂ ಅಧ್ಯಕ್ಷರು, ಶ್ರೀ ಬೊಬ್ಬರಿಯ ಮತ್ತು ಪರಿವಾರ & ಶ್ರೀ ನಂದಿಕೇಶ್ವರ ದೈವಸ್ಥಾನ ಅಭಿವೃದ್ಧಿ ಸಮಿತಿ.

