ಸುರತ್ಕಲ್ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

0
29

ಸುರತ್ಕಲ್ ಹೋಬಳಿ ಮಟ್ಟದ 14 ರ ವಯೋಮಾನದ ಬಾಲಕ ಬಾಲಕಿಯರ ಪ್ರಾಥಮಿಕ/ಪ್ರೌಢ ಶಾಲಾ ವಿಭಾಗದ ಕ್ರೀಡಾ ಕೂಟ 2026-27. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಮತ್ತು ಹಿಂದು ವಿದ್ಯಾದಾಯಿನೀ ಸಂಘದ ಆಡಳಿತ ಕ್ಕೆ ಒಳಪಟ್ಟ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ ಮೈರ್ಪಾಡಿ ಕುಳಾಯಿ ಇವರ ಸಹಯೋಗದಲ್ಲಿ ಸುರತ್ಕಲ್ ಹೋಬಳಿ ಮಟ್ಟದ 14 ರ ವಯೋಮಾನದ ಬಾಲಕ ಬಾಲಕಿಯರ ಪ್ರಾಥಮಿಕ/ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟವು ಎನ್.ಐ.ಟಿ.ಕೆ ಕ್ರೀಡಾಂಗಣದಲ್ಲಿ ಜರುಗಿತು.ಪೂರ್ವಾಹ್ನ 9 ಗಂಟೆಗೆ ಸರಿಯಾಗಿ ಕ್ರೀಡಾಪಟುಗಳ ಆಕರ್ಷಣೆಯ ಸಮಾವೇಶ ದೊಂದಿಗೆ ವಿದ್ಯಾದಾಯಿನೀ ಪ್ರೌಢ ಶಾಲೆಯ ಬ್ಯಾಂಡ್ ಸೆಟ್ ನಲ್ಲಿ ಗಣ್ಯರನ್ನು ಕರೆತರಲಾಯಿತು.

ಸುರತ್ಕಲ್ ಹೋಬಳಿಯ ಧ್ವಜಾರೋಹಣವನ್ನು ಹಿಂದು ವಿದ್ಯಾದಾಯಿನೀ ಸಂಘ ದ ಉಪಾಧ್ಯಕ್ಷರಾದ ಟಿ.ಯನ್ ರಮೇಶ್ ರವರು ನೆರವೇರಿಸಿದರು.ಶಾಲಾ ಧ್ವಜಾರೋಹಣವನ್ನು ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಚ್ .ವಿ ರಾಘವೇಂದ್ರ ರಾವ್ ನೆರವೇರಿಸಿದರು.ನಂತರ ನಡೆದ ಕ್ರೀಡಾಕೂಟ ದ ಉದ್ಘಾಟನೆಯ ಸಮಾರಂಭದಲ್ಲಿ ಮೊದಲಿಗೆ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ ಯವರ ಮತ್ತು ರಾಷ್ಟ್ರ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಮಕ್ಕಳಿಂದ ನಾಡಗೀತೆಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಜಯಚಂದ್ರ ಹತ್ವಾರ್ ವಹಿಸಿ ಮಕ್ಕಳು ಕ್ರೀಡೆಯನ್ನು ಪ್ರೀತಿಸುವುದರ ಮೂಲಕ ಕ್ರೀಡಾ ಮನೋಭಾವನೆ ಬೆಳೆಸಿ ದೇಶಕ್ಕೆ ಕೀರ್ತಿ ತರಲು ಶ್ರಮಿಸಬೇಕು ಎಂದು ಶುಭ ಹಾರೈಸಿದರು.

ಕ್ರೀಡಾಕೂಟದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಶ್ರೀಧರ್ ಯಚ್ ರವರು ಎಲ್ಲಾ ಅತಿಥಿಗಳ ಸಮ್ಮುಖದಲ್ಲಿ ನೆರವೇರಿಸಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆ ಯ ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗಳಾದ ಶ್ರೀ ಜೀವನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡಾಪಟುಗಳು ಕ್ರೀಡೆಯನ್ನು ಪ್ರೀತಿಸಿ ತೊಡಗಿಸಿಕೊಳ್ಳ ಬೇಕೆಂದು ಕರೆನೀಡಿದರು.

ಈ ಸಂದರ್ಭ ಇಲಾಖೆ ವತಿಯಿಂದ ಅಭಿನಂದನಾ ಪತ್ರವನ್ನು ಮುಖ್ಯ ಶಿಕ್ಷಕರಿಗೆ ವಿತರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘದ ಉಪಾಧ್ಯಕ್ಷರಾದ ಟಿ ಎನ್ ರಮೇಶ್,ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹೆಚ್ ವಿ ರಾಘವೇಂದ್ರ ರಾವ್,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಳಾದ ಶ್ರೀನಿವಾಸ ಕುಳಾಯಿ,ಅಂಗರಗುಂಡಿ ಮತ್ತು ಕಾವೂರು ಕ್ಲಸ್ಟರಿನ ಸಿ.ಆರ್.ಪಿ ಯವರಾದ ದೀಪಿಕಾ, ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿತಿನ್ ಪುತ್ರನ್,ಶಾಲಾ ಸಂಚಾಲಕಿ ಕೆ.ಕಲಾವತಿ,ಶಾಲಾ ಹಳೆ ವಿದ್ಯಾರ್ಥಿ ಶಾಲಾಭಿವೃದ್ಧಿ ಸಮಿತಿ ಸಂಚಾಲಕರಾದ ಯೋಗೀಶ್ ಸನಿಲ್ ಕುಳಾಯಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪೂರ್ಣಿಮಾ,ಹಳೆ ವಿದ್ಯಾರ್ಥಿ ಹಾಗೂ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ, ಇದರ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಕುಳಾಯಿ,ಹಳೆ ವಿದ್ಯಾರ್ಥಿ ವಿರಾಟ್ ಸಂಸ್ಥೆಯ ಕಾರ್ಯದರ್ಶಿ ಪಿ.ವಿ ಗಿರೀಶ್, ನಿವೃತ್ತ ಶಿಕ್ಷಕ ರಾದ ಭರತ್ ಕುಮಾರ್ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗೋಪಾಲ್.ವಿ ಎಲ್ಲರನ್ನು ಸ್ವಾಗತಿಸಿದರು.

ಸಹಶಿಕ್ಷಕರಾದ ಭಾಸ್ಕರ್ ಕೆ ಕಾರ್ಯಕ್ರಮ ನಿರೂಪಿಸಿದರು.ಸಹಶಿಕ್ಷಕರಾದ ಮಲಕಪ್ಪ ರವರು ಧನ್ಯವಾದ ಗೈದರು. ಸಭಾ ಕಾರ್ಯಕ್ರಮದ ತರುವಾಯ ದೈಹಿಕ ಶಿಕ್ಷಣ ಶಿಕ್ಷಕರ ಸಹಕಾರ ದೊಂದಿಗೆ ಅಥ್ಲೆಟಿಕ್ ನ ಎಲ್ಲಾ ಆಟಗಳು ಸಾಯಂಕಾಲದ ಹೊತ್ತಿಗೆ ಸಂಪನ್ನಗೊಂಡಿತು.ಸಾಯಂಕಾಲ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಿದ್ಯಾದಾಯಿನೀ ಕ್ರೀಡಾ ಅಕಾಡೆಮಿ ಮಾಜಿ ಸಂಚಾಲಕರಾದ ಸುಬ್ರಹ್ಮಣ್ಯ ಟಿ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಅಜೇಯ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ರಾದ ಗಂಗಾಧರ ಬಂಜನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿತಿನ್ ಪುತ್ರನ್, ಹಿರಿಯ ದೈಹಿಕ ಶಿಕ್ಷಕರಾದ ಆನಂದ್,ಎನ್.ಐ.ಟಿ.ಕೆ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್, ಶಾಲಾ ಸಂಚಾಲಕಿ ಕೆ ಕಲಾವತಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕರಾದ ಗೋಪಾಲ್.ವಿ ಸ್ವಾಗತಿಸಿದರು.

ಸಹಶಿಕ್ಷಕರಾದ ಶ್ರೀ ಮದಪ್ಪ ಮಾದರ ಕಾರ್ಯಕ್ರಮ ನಿರೂಪಿಸಿದರು.ಸಹಶಿಕ್ಷಕರಾದ ಮಲಕಪ್ಪ ರವರು ಧನ್ಯವಾದ ಅರ್ಪಿಸಿದರು.ಸಹಶಿಕ್ಷಕ ಶಿಕ್ಷಕಿಯವರ,ಶಿಕ್ಷಕೇತರ ಸಿಬ್ಬಂದಿ ಯವರ, ಅಡುಗೆ ಸಿಬ್ಬಂದಿ ಯವರ, ಶಿಕ್ಷಕ ರಕ್ಷಕ ಸಂಘದ ಸದಸ್ಯರ ಸಹಕಾರ ದೊಂದಿಗೆ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಿತು.