ಶ್ರೀ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 2 ಲಕ್ಷ ಅನುದಾನ ಹಸ್ತಾಂತರ

0
26

ಕೆಮ್ಮಣ್ಣು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಉಡುಪಿ ವತಿಯಿಂದ ಪಡುತೋನ್ಸೆ ಕೆಮ್ಮಣ್ಣುವಿನ ಕೋಡಿ ಕಂಡಾಳ ಶ್ರೀ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಧರ್ಮಸ್ಥಳದಿಂದ ಮಂಜೂರಾದ ರೂ. ೨,೦೦,೦೦೦ (ಎರಡು ಲಕ್ಷ) ಅನುದಾನದ ಚೆಕ್ಕನ್ನು ದೈವಸ್ಥಾನದ ಆಡಳಿತ ಮಂಡಳಿಗೆ ಮಾನ್ಯ ತಾಲೂಕು ಯೋಜನಾಧಿಕಾರಿಯಾದ ಸುರೇಂದ್ರ ನಾಯ್ಕ್ ರವರು ಅಧಿಕೃತವಾಗಿ ಹಸ್ತಾಂತರಿಸಿದರು. ಮಲ್ಪೆ ವಲಯದ ಮೇಲ್ವಿಚಾರಕಿಯಾದ ಸುಜಾತಾ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ರಘುರಾಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಧುಸೂಧನ ಪೂಜಾರಿ, ಸುಧಾಕರ ಶೇರಿಗಾರ್ (ಗುರಿಕಾರರು), ಕಾರ್ಯದರ್ಶಿ ಸುರೇಶ್ ನಾಯ್ಕ್ ಹಾಗೂ ಕೋಶಾಧಿಕಾರಿ ಕುಶಾಲ್ ಅಮೀನ್ ಬೆಂಗ್ರೆ ಉಪಸ್ಥಿತರಿದ್ದರು.

ಅಲ್ಲದೆ, ಸೇವಾಪ್ರತಿನಿಧಿ ಶಾಲಿನಿ, ಕೆಮ್ಮಣ್ಣು ಒಕ್ಕೂಟದ ಅಧ್ಯಕ್ಷರಾದ ಮಾಲತಿ ರಮೇಶ್, ಪದಾಧಿಕಾರಿಗಳು, ಕೆಮ್ಮಣ್ಣು ಒಕ್ಕೂಟದ ಸದಸ್ಯರು, ಸಮಿತಿಯ ಸರ್ವ ಸದಸ್ಯರು, ದೈವಸ್ಥಾನದ ಹತ್ತು ಸಮಸ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.