ಕಲಾಕುಂಚದಿಂದ ಗುರುಮೂರ್ತಿಯವರು “ಕರುನಾಡ ಕನ್ನಡ ಕಣ್ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ

0
18

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕರ್ನಾಟಕದ 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಹಿತಿಗಳು, ಸಮಾಜ ಸೇವಕರಾದ ಮಾಯಕೊಂಡದ ಷಡಾಕ್ಷರಪ್ಪ ಗುರುಮೂರ್ತಿ ಇವರನ್ನು “ಕರುನಾಡ ಕನ್ನಡ ಕಣ್ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ತಿಳಿಸಿದ್ದಾರೆ.

ನಿರಂತರವಾಗಿ ಕಠಿಣ ಪರಿಶ್ರಮದಿಂದ ಸಮಾಜ ಸೇವೆಯನ್ನು ಗುರುತಿಸಿ ಗುರುಮೂರ್ತಿಯವರನ್ನು ನವಂಬರ್ 15 ರಂದು ಭಾನುವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ವೈಭವಪೂರ್ಣ ಸನ್ಮಾನಿಸಿ ಗೌರವಿಸುತ್ತಾರೆ ಎಂದು ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ. ಕಲಾಕುಂಚದ ವಿವಿಧ ಶಾಖೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಇವರಿಗೆ ಅಭಿಮಾನದಿಂದ ಅಭಿನಂದಿಸಿ ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here