ಹಳೆಯಂಗಡಿ ನಾರಾಯಣ ಸನಿಲ್ ವಿದ್ಯಾಸಂಸ್ಥೆ: ಶಾಲಾ ಸಂಸತ್, ವಿವಿಧ ಸಂಘಗಳ ಉದ್ಘಾಟನೆ

0
57

ಮಂಗಳೂರು: ಮಂಗಳೂರು ತಾಲೂಕಿನ ಹಳೆಯಂಗಡಿಯ ನಾರಾಯಣ ಸನಿಲ್ ವಿದ್ಯಾಸಂಸ್ಥೆಯಲ್ಲಿ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ನಡೆದು ನೂತನ ಪದಾಧಿಕಾರಿಗಳ ಹಾಗೂ ವಿವಿಧ ಸಂಘಗಳ ಉದ್ಘಾಟನೆ ನಡೆಯಿತು.
ಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹೆರಿಕ್ ಪಾಯ್ಸ್ ರವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿತು ಶಾಲೆಯ ಕೀರ್ತಿಯನ್ನು ಬೆಳಗಿಸಿ, ಶಾಲಾ ಮುಂದಾಳುಗಳು ಶಾಲೆಯಲ್ಲಿ ಸ್ವಚ್ಛತೆ, ವಿದ್ಯಾರ್ಥಿಗಳ ಉತ್ತಮ ನಡತೆಯನ್ನು ಪ್ರೋತ್ಸಾಹಿಸಿ ಎಂದು ತಿಳಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಡುಬಿದ್ರೆಯ ಅಂತರ್ ರಾಷ್ಟ್ರೀಯ ಕ್ರೀಡಾಪಟು, ತರಬೇತುದಾರ ಕುಮಾರಸ್ವಾಮಿ ಅವರು ಹಾಜರಿದ್ದು ಶಾಲಾ ಸಂಸತ್ ನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಶಿಕ್ಷಕ ಮೈಕೆಲ್ ಡಿಸೋಜಾ ಅವರು ಶಾಲಾ ನೀತಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ನೆನಪಿಸಿದರು.
ಜೂಲಿಯೆಟ್ ಫೆರ್ನಾಂಡಿಸ್ ಸ್ವಾಗತಿಸಿದರು, ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು, ಚೈತ್ರ ವಂದಿಸಿದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here