ಉಡುಪಿ ಜಿಲ್ಲೆ ಹಾವಂಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಇತ್ತೀಚೆಗೆ ಹರಕೆಯ ಕೋಲ ಸೇವೆ ಸಂಭ್ರಮದಿಂದ ಜರಗಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ವಿಶೇಷವಾಗಿ ದೈವಾರಾಧನಾ ಕ್ಷೇತ್ರ, ಸಮಾಜ ಸೇವೆ ಮತ್ತು ಸಹಕಾರಿ ಕ್ಷೇತ್ರ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಮೆಚ್ಚಿ, ಅಖಿಲ ಭಾರತ ದೈವರಾಧಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ಸಂಸ್ಥಾಪಕ ಅಧ್ಯಕ್ಷರು,ಹಾಗೂ ಪ್ರವರ್ತಕರು ನಮ್ಮ ಉಡುಪಿ ಟಿವಿ ಮತ್ತು ತುಳುನಾಡು ವಾರ್ತೆ ವರದಿಗಾರರಾಗಿರುವ ವಿನೋದ್ ಶೆಟ್ಟಿ ಅವರನ್ನು ಕ್ಷೇತ್ರದ ವತಿಯಿಂದ ಶಾಲು-ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮುಖ್ಯಸ್ಥ ಭರತ್ ಪೂಜಾರಿ, ಹಾಗೂ ಕುಟುಂಬಸ್ಥರು ಹಾಗೂ ಅಖಿಲ ಭಾರತ ದೈವರಾದಕರ ಒಕ್ಕೂಟ ಉಡುಪಿ ಜಿಲ್ಲೆ
ಸಂಘಟನಾ ಕಾರ್ಯದರ್ಶಿ ಕೃಷ್ಣ ಪೂಜಾರಿ ಅಂಜಾರು ಹಾಗೂ ಪ್ರಮುಖ ಅತಿಥಿಗಳು ಉಪಸ್ಥಿತಿ ಇದ್ದರು.

