Saturday, June 14, 2025
HomeUncategorizedಆಟಿಸಂ ಮಕ್ಕಳಿಗೆ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರ ಉದ್ಘಾಟಿಸಿದ ಆರೊಗ್ಯ ಸಚಿವ ದಿನೇಶ್ ಗುಂಡೂರಾವ್

ಆಟಿಸಂ ಮಕ್ಕಳಿಗೆ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರ ಉದ್ಘಾಟಿಸಿದ ಆರೊಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು; ಆಟಿಸಂ ಮಕ್ಕಳಿಗಾಗಿ ಹೊಸದಾಗಿ ಸ್ಥಾಪಿಸಿರುವ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಆವರಣ, ಧನ್ವಂತ್ರಿ ರಸ್ತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಉದ್ಘಾಟಿಸಿದರು.
ಈ ಕೇಂದ್ರವು ಬೆಂಗಳೂರು ಇಂಡಸ್ಟ್ರಿಯಲ್ ಟೌನ್ ಲಯನ್ಸ್ ಸರ್ವೀಸ್ ಫೌಂಡೇಶನ್ ಮತ್ತು ಬಿಜಯಾದೇವಿ ಚೋರಾರಿಯಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಿಂದ ಸ್ಥಾಪಿಸಲಾಗಿದೆ. ಕಾರ್ಯಕ್ರಮದಲ್ಲಿ ಲಯನ್ ಮೊಹನ್ ಕುಮಾರ್ ಎನ್ (ಜಿಲ್ಲಾ ರಾಜ್ಯಪಾಲರು 317ಎ) ಭಾಗವಹಿಸಿದ್ದರು.
ನರ್ಪತ್ ಸಿಂಗ್ ಚೋರಾರಿಯಾ (ಡೈರೆಕ್ಟರ್, ಎಂಬಸಿ ಗ್ರೂಪ್), ವಿಶೇಷ ಆಹ್ವಾನಿತರಾಗಿ ವೆಂಕಟ್ ಪ್ರಸಾದ್ (ಎಂಡಿ, ವಿ ವಿ ಕಂಟ್ರೋಲ್ಸ್), 1ನೇ ಉಪ ಜಿಲ್ಲಾ ರಾಜ್ಯಪಾಲರಾದ ಜಿ. ಮೊಹನ್, ಟ್ರಸ್ಟ್ ಚೇರ್ಮನ್ ಲಯನ್ ಡಿ. ಫಿಲಿಪ್ರಾಜ್ ಅಧ್ಯಕ್ಷತೆ ವಹಿಸಿದ್ದರು , ಕಾರ್ಯದರ್ಶಿ ಲಯನ್ ಗೋವಿಂದ್ ಕೆ. ಕಿತ್ತಾನೆ, ಖಜಾಂಚಿ ಲಯನ್ ಮುರುಗಾನಂದಂ ಮತ್ತು ಇತರ ಟ್ರಸ್ಟಿಗಳು , ಕ್ಲಬ್ ಸದಸ್ಯರು ಹಾಗೂ ಲಯನ್ ಸದಸ್ಯರು ಉಪಸ್ಥಿತರಿದ್ದರು. ಆಯುಷ್ ಆಯುಕ್ತರಾದ ವಿಪಿನ್ ಸಿಂಗ್ ಮತ್ತು ಜಿ. ಎ. ಎಂ. ಸಿ. ಪ್ರಿನ್ಸಿಪಾಲ್ ಡಾ. ಸುರೇಖಾ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular