ಆರೋಗ್ಯಕರ ಬಿಟ್ರೂಟ್ ಇಡ್ಲಿ: ಮನೆಯಲ್ಲೇ ಸುಲಭವಾಗಿ ತಯಾರಿಸಿ..!

0
13

ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಲ್ಲಿ ಇಡ್ಲಿಗೆ ವಿಶೇಷ ಸ್ಥಾನವಿದೆ. ಸಾಮಾನ್ಯ ಇಡ್ಲಿ, ರವಾ ಇಡ್ಲಿ, ರಾಗಿ ಇಡ್ಲಿ, ಅವಲಕ್ಕಿ ಇಡ್ಲಿಯಂತೆ ಇದೀಗ ಆರೋಗ್ಯಕರ ಹಾಗೂ ಆಕರ್ಷಕ ಬಣ್ಣದ ಬಿಟ್ರೂಟ್ ಇಡ್ಲಿ ಕೂಡ ಮನೆಗಳಲ್ಲಿ ಜನಪ್ರಿಯವಾಗುತ್ತಿದೆ.

ಬಿಟ್ರೂಟ್‌ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ತರಕಾರಿಯಾಗಿದ್ದು, ರಕ್ತದೊತ್ತಡ ನಿಯಂತ್ರಿಸಲು ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿಯಾಗಿದೆ. ಹೀಗಾಗಿ ರುಚಿ ಮತ್ತು ಆರೋಗ್ಯ ಎರಡನ್ನೂ ಒಟ್ಟಿಗೆ ನೀಡುವ ಬಿಟ್ರೂಟ್ ಇಡ್ಲಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

🔸 ಹುರಿದ ರವೆ
🔸 ಮೊಸರು
🔸 ಉಪ್ಪು
🔸 ಬಿಟ್ರೂಟ್
🔸 ಶುಂಠಿ
🔸 ಹಸಿಮೆಣಸಿನಕಾಯಿ
🔸 ಗೋಡಂಬಿ
🔸 ಅಗತ್ಯಕ್ಕೆ ತಕ್ಕಷ್ಟು ನೀರು

ತಯಾರಿಸುವ ವಿಧಾನ

ಮೊದಲಿಗೆ ಬಿಟ್ರೂಟ್ ಅನ್ನು ಚೆನ್ನಾಗಿ ತೊಳೆದು ಚಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ಮಿಕ್ಸರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ಹುರಿದ ರವೆ, ಮೊಸರು, ಉಪ್ಪು, ರುಬ್ಬಿದ ಬಿಟ್ರೂಟ್, ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ, ಗೋಡಂಬಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಈ ಹಿಟ್ಟನ್ನು 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ. ಬಳಿಕ ಇಡ್ಲಿ ತಟ್ಟೆಗೆ ಹಿಟ್ಟನ್ನು ಹಾಕಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ.

ಬಿಸಿಬಿಸಿಯಾದ, ಪೌಷ್ಟಿಕ ಹಾಗೂ ಆಕರ್ಷಕ ಬಣ್ಣದ ಬಿಟ್ರೂಟ್ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ತೆಂಗಿನ ಚಟ್ನಿ ಅಥವಾ ಸಾಂಬಾರ್ ಜೊತೆಗೆ ಇದನ್ನು ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

LEAVE A REPLY

Please enter your comment!
Please enter your name here