ಸಂಜೆಯಾಗುತ್ತಿದ್ದಂತೆ ಏನಾದರೂ ಖಾರ, ಚಟಪಟೆ ಮತ್ತು ರುಚಿಕರವಾದ ತಿಂಡಿ ತಿನ್ನಬೇಕೆನಿಸುವುದು ಸಹಜ. ಪ್ರತಿದಿನದ ಬೇಳೆ, ಬಜ್ಜಿ, ಪಕೋಡಾಗಳಿಗಿಂತ ಭಿನ್ನವಾಗಿ ಮಹಾರಾಷ್ಟ್ರದ ಜನಪ್ರಿಯ ತಿಂಡಿ ಭಾಕರ್ವಡಿ ಬಳಸಿ ತಯಾರಿಸಬಹುದಾದ ಈ ಚಾಟ್ ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತದೆ.
ಈ ಚಾಟ್‌ನ ವಿಶೇಷತೆ ಎಂದರೆ, ಇದು ಸಿಹಿ, ಖಾರ, ಹುಳಿ ಹಾಗೂ ಕ್ರಿಸ್ಪಿ ರುಚಿಗಳ ಅದ್ಭುತ ಸಂಯೋಜನೆಯಾಗಿದ್ದು, ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಿಕೊಳ್ಳುವಂತೆ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು
🔸 1 ಕಪ್ ಸಣ್ಣ ಗಾತ್ರದ ಭಾಕರ್ವಡಿ
🔸 1 ಕಪ್ ಕುರ್ಮುರ (ಪುರಿ)
🔸 1 ಸಣ್ಣ ಈರುಳ್ಳಿ (ಸಣ್ಣದಾಗಿ ಹೆಚ್ಚಿದ್ದು)
🔸 2 ಹಸಿರು ಮೆಣಸಿನಕಾಯಿ
🔸 1 ಟೊಮೆಟೊ (ಸಣ್ಣದಾಗಿ ಹೆಚ್ಚಿದ್ದು)
🔸 1 ಸೌತೆಕಾಯಿ (ಸಣ್ಣದಾಗಿ ಹೆಚ್ಚಿದ್ದು)
🔸 1 ಬೇಯಿಸಿದ ಆಲೂಗಡ್ಡೆ
🔸 1 ದೊಡ್ಡ ಚಮಚ ನಿಂಬೆ ರಸ
🔸 1 ಚಮಚ ಚಾಟ್ ಮಸಾಲಾ
🔸 ಅರ್ಧ ಚಮಚ ಖಾರದ ಪುಡಿ
🔸 1 ದೊಡ್ಡ ಚಮಚ ಜೇನುತುಪ್ಪ
🔸 ರುಚಿಗೆ ತಕ್ಕಷ್ಟು ಉಪ್ಪು
🔸 ಅರ್ಧ ಕಪ್ ಸೇವ್
🔸 ಅರ್ಧ ಕಪ್ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ
ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಭಾಕರ್ವಡಿಗಳನ್ನು ಹಾಕಿ. ನಂತರ ಅದಕ್ಕೆ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಹಸಿರು ಮೆಣಸಿನಕಾಯಿ ಹಾಗೂ ಬೇಯಿಸಿದ ಆಲೂಗಡ್ಡೆ ತುಂಡುಗಳನ್ನು ಸೇರಿಸಿ.
ಅದಕ್ಕೆ ಚಾಟ್ ಮಸಾಲಾ, ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಜೇನುತುಪ್ಪ ಮತ್ತು ನಿಂಬೆ ರಸ ಹಾಕಿ ಕಲಸಿ. ನಂತರ ಕುರ್ಮುರ ಸೇರಿಸಿ ಎಲ್ಲವನ್ನೂ ಒಟ್ಟಿಗೆ ಬೆರೆಸಬೇಕು.
ಕೊನೆಯಲ್ಲಿ ಸೇವ್, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಭಾಕರ್ವಡಿ ಮತ್ತು ಕುರ್ಮುರ ಮೆತ್ತಗಾಗುವ ಮೊದಲು ಸರ್ವಿಂಗ್ ಬೌಲ್‌ಗೆ ಹಾಕಿ, ಮೇಲಿಂದ ಸೇವ್ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಕ್ರಿಸ್ಪಿ ಭಾಕರ್ವಡಿ ಚಾಟ್ ಸವಿಯಲು ಸಿದ್ಧ.

