ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವಕಾಲೇಜುಉಡುಪಿ ವತಿಯಿಂದ ಹೆಬ್ರಿಪದವಿ ಪೂರ್ವಕಾಲೇಜಿನತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಪಾಂಡುರಂಗರಮಣ ನಾಯಕ್‌ಅಮೃತ ಭಾರತಿ ಪದವಿ ಪೂರ್ವಕಾಲೇಜಿನಲ್ಲಿ ನಡೆಯಿತು.
ಹಾಸ್ಟೆಲ್‌ಕಮಿಟಿಯಗೌರವಅಧ್ಯಕ್ಷರಾದ ಯೋಗಿಶ್ ಭಟ್ ಉದ್ಘಾಟಿಸಿ, ಕ್ರೀಡೆ ಶಿಸ್ತು ಮತ್ತು ಸಂಯಮದ ಪಾಠವನ್ನು ಕಲಿಸುತ್ತದೆ. ಕ್ರೀಡೆ ನಮ್ಮ ಇತಿಮಿತಿಗಳ ಪರಿಚಯವನ್ನು ಮಾಡಿಕೊಡುತ್ತದೆ ಎಂದರು.

ಭಾರತಿ ಪ.ಪೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಚ್.ರಾಜೇಶ್ ನಾಯಕ್, ಟ್ರಸ್ಟಿಗಳಾದ ಸುಧೀರ್ ನಾಯಕ್, ಪ್ರಾಂಶುಪಾಲರಾದ ಪ್ರಕಾಶ್‌ಜೋಗಿ, ಪಿ.ಆರ್.ಓ ಮತ್ತು ಹೆಬ್ರಿತಾಲೂಕುಕ್ರೀಡಾ ಸಂಯೋಜಕರಾದ ವಿಜಯ್‌ಕುಮಾರ್ ಶೆಟ್ಟಿ, ಸರಕಾರಿ ಪ. ಪೂ ಕಾಲೇಜಿನ ಪ್ರಾಂಶುಪಾಲರಾದ ವಿಜಯ್, ಸರಕಾರಿಪ. ಪೂ ಕಾಲೇಜಿನಉಪನ್ಯಾಸಕರಾದ ಬಲರಾಮ ಮತ್ತು ಶೃತಿ, ತೀರ್ಪುಗಾರರಾದ ಶಿರ್ಲಾಲು ಶಾಲೆಯಶಿಕ್ಷಕರಾದ ವಸಂತ್, ಕುಕ್ಕುಜೆ ಪ್ರಾಥಮಿಕ ಶಾಲೆಯ ಶಂಕರ್ ನಾಯ್ಕ್, ಕುಕ್ಕುಜೆ ಪ್ರೌಢಶಾಲೆಯ ಪ್ರಶಾಂತ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನು ಟ್ರಸ್ಟಿಗಳಾದ ಸುಧೀರ್ ನಾಯಕ್ ಮಾತನಾಡುತ್ತಾ, ಕ್ರೀಡೆಗಟ್ಟಿ ಮನೋಸ್ಥಿತಿಯನ್ನು ಬೆಳೆಸುತ್ತದೆ ಎಂದರು.ಸರಕಾರಿ ಪ. ಪೂ ಕಾಲೇಜಿನಉಪನ್ಯಾಸಕಾರದ ಬಲರಾಮ್, ಸಂಸ್ಥೆಯ ಪ್ರಾಂಶುಪಾಲರಾದ ಪ್ರಕಾಶ್‌ಜೋಗಿ, ಪಿ.ಆರ್.ಓ ಮತ್ತು ಹೆಬ್ರಿತಾಲೂಕುಕ್ರೀಡಾ ಸಂಯೋಜಕರಾದ ವಿಜಯ್‌ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಕಿ ಪಾವನ ಶೆಟ್ಟಿ ಉಪಸ್ಥಿತರಿದ್ದರು.

ಬಾಲಕರ ವಿಭಾಗದಲ್ಲಿ ಸರಕಾರಿ, ಪದವಿ ಪೂರ್ವಕಾಲೇಜು ಹೆಬ್ರಿ ವಿಜೇತವಾಯಿತು.ಪಿ.ಆರ್.ಎನ್. ಅಮೃತ ಭಾರತಿ ಪ. ಪೂ.ಕಾಲೇಜುರನ್ರ‍್ಸ್ಅಪ್ ಪ್ರಶಸ್ತಿ ಪಡೆಯಿತು.
ಬಾಲಕಿಯ ವಿಭಾಗದಲ್ಲಿಪಿ.ಆರ್.ಎನ್. ಅಮೃತ ಭಾರತಿ ಪ. ಪೂ.ಕಾಲೇಜು ಹೆಬ್ರಿ ವಿಜೇತವಾಯಿತು.ಸರಕಾರಿ, ಪದವಿ ಪೂರ್ವಕಾಲೇಜು ಹೆಬ್ರಿ ರನ್ನರ್ ಅಪ್‌ಪ್ರಶಸ್ತಿ ಪಡೆದುಕೊಂಡಿತು.
ಬಾಲಕರ ವಿಭಾಗದಲ್ಲಿ ಸರಕಾರಿ, ಪದವಿ ಪೂರ್ವಕಾಲೇಜಿನ ಆದಿಶೇಷ ಬೆಸ್ಟ್ರನ್ನರ್ ಹಾಗೂ ಪಿ.ಆರ್.ಎನ್. ಅಮೃತ ಭಾರತಿ ಪ. ಪೂ.ಕಾಲೇಜಿನ ಪ್ರಥ್ವಿ ಬೆಸ್ಟ್ಚೇಸರ್ ಪ್ರಶಸ್ತಿಯನ್ನು ಪಡೆದರು.
ಬಾಲಕಿಯರ ವಿಭಾಗದಲ್ಲ್ಲಿ ಸರಕಾರಿ, ಪದವಿ ಪೂರ್ವಕಾಲೇಜಿನ ಅನುಷಿಕ ಬೆಸ್ಟ್ರನ್ನರ್ ಹಾಗೂ ಪಿ.ಆರ್.ಎನ್. ಅಮೃತ ಭಾರತಿ ಪ. ಪೂ.ಕಾಲೇಜಿನ ಪ್ರತೀಕ್ಷ ಬೆಸ್ಟ್ಚೇಸರ್ ಪ್ರಶಸ್ತಿ ಪಡೆದರು. ಕನ್ನಡಉಪನ್ಯಾಸಕ ವೀಣೇಶ್‌ಅಮೀನ್‌ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

