ವರದಿ ರಾಯಿ ರಾಜ ಕುಮಾರ
ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊರಂತಬೆಟ್ಟು ಪ್ರದೇಶದಲ್ಲಿ ಇಂದು ಬೆಳಿಗ್ಗೆ ಬಹಳ ವೇಗದಿಂದ ಬಂದ ಕ್ರೇನ್ ನಿಯಂತ್ರಣ ತಪ್ಪಿ, ಮನೆಯೊಂದರ ಮೇಲೆ ಬಿದ್ದಿತು. ಮನೆ ಹಾನಿಗೊಳಗಾಗಿದ್ದು ಮನೆಯಲ್ಲಿದ್ದ ಕುಟುಂಬ ಸದಸ್ಯರಿಗೆ ಯಾವುದೇ ಗಾಯಗಳಿಲ್ಲದೆ ಪವಾಡ ಸದೃಶರಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮುಂದಿನ ತನಿಖೆ ಜಾರಿಯಲ್ಲಿದ್ದು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.

