ಮಾಯಕೊದ ಕನ’ ಆಲ್ಬಮ್ ಹಾಡು ಶೀಘ್ರದಲ್ಲೇ ಬಿಡುಗಡೆ

0
20

ಮಂಗಳೂರು : ಸನ್ನಿಧಿ ಅರ್ಪಿಸುವ ಹಾಗೂ ಹರೀಶ್ ಪಕ್ಕಳ ಕೊಟ್ರಗುತ್ತು ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಸಿನಿಮೀಯ ಕಥಾಹಂದರದ “ಮಾಯಕೊದ ಕನ” ಆಲ್ಬಮ್ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ವಿಶಿಷ್ಟ ಕಥಾ ನಿರೂಪಣೆಯೊಂದಿಗೆ ಸಿದ್ಧಗೊಂಡಿರುವ ಈ ಆಲ್ಬಮ್ ಹಾಡಿನ ಚಿತ್ರಕಥೆಯನ್ನು ಸುಜಿತ್ ಕೋಟೆಕಾರ್ ರಚಿಸಿದ್ದು, ಮಿಥುನ್ ಬಡಗಬೆಳ್ಳೂರು ನಿರ್ದೇಶನದ ಹೊಣೆಗಾರಿಕೆಯನ್ನು ನಿರ್ವಹಿಸಿದ್ದಾರೆ.

ಈ ಹಾಡಿಗೆ ‘ದೇವೆರೆ ಕಿನ್ನಿ’ ಖ್ಯಾತಿಯ ತ್ರೀಕ್ಷಾ ಮಡ್ಯಾರ್ ಹಾಗೂ ರಕ್ಷಿತ್ ಕೊಲ್ಯ ಧ್ವನಿಯಾಗಿದ್ದು, ಭಾರತಿ ಹೇಮಂತ್, ಗುಣಕರ್ ಕೊಲ್ಯ, ಸುಕೇಶ್ ತೋಕೂರ್ ಹಾಗೂ ದಿಶಾ ಎಸ್. ಬಂಗೇರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಾಡಿನ ಛಾಯಾಗ್ರಹಣ ಮತ್ತು ರೆಕಾರ್ಡಿಂಗ್ ಜವಾಬ್ದಾರಿಯನ್ನು ಅನಿಶ್ ಎಸ್. ಕಿನ್ನಿಗೋಳಿ ನಿರ್ವಹಿಸಿದ್ದು, ಪ್ರಚಾರ ಕಲೆಯನ್ನು ಕಿರಣ್ ಕೊಯಿಲ ರೂಪಿಸಿದ್ದಾರೆ.

ಇದರ ಜೊತೆಗೆ ಸುಬ್ರಹ್ಮಣ್ಯ ಪೆರ್ಡೂರು, ಯಶೋದಾ ಸತೀಶ್, ಗಾಯತ್ರಿ ಪಾವೂರ್ ಹಾಗೂ ಪ್ರಕಾಶ್ ಅಮೀನ್ ಕೊಲ್ಯ ಸಹ ಈ ಯೋಜನೆಗೆ ಸಹಕಾರ ನೀಡಿದ್ದಾರೆ.

ಸಿನಿಮೀಯ ಶೈಲಿಯ ಕಥೆ, ಸಂಗೀತ ಮತ್ತು ದೃಶ್ಯ ವೈಭವದೊಂದಿಗೆ ಮೂಡಿಬಂದಿರುವ “ಮಾಯಕೊದ ಕನ” ಆಲ್ಬಮ್ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಿ ಸಂಗೀತ ಪ್ರಿಯರ ಮನ ಗೆಲ್ಲುವ ನಿರೀಕ್ಷೆಯಿದೆ.