ಕೂಡ್ಲು ಬಾಡಬೆಟ್ಟು ಶ್ರೀ ಕ್ಷೇತ್ರದಲ್ಲಿ ಅ.11ರಿಂದ ಶರನ್ನವರಾತ್ರಿ ವೈಭವ

0
11

ಕುಂದಾಪುರ : ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌ (ರಿ.) ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ,ಕನ್ಯಾನ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿದೆ.

ದಿನಾಂಕ 11-10-2026 ನೇ ಆದಿತ್ಯವಾರದಿಂದ 21-10-2026 ಬುಧವಾರದವರೆಗೆ ನವರಾತ್ರಿ ಪೂಜೆ ಹಾಗೂ ವಿಜಯದಶಮಿ ಪೂಜೆ ನಡೆಯಲಿದೆ.

ಅಕ್ಟೋಬರ್ 20ರಂದು ಚಂಡಿಕಾ ಹೋಮ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಿದ ಬಳಿಕ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ನವರಾತ್ರಿಯ ಕೊನೆಯ ದಿನ ಸಂಜೆ 8 ಗಂಟೆಗೆ ರಂಗಪೂಜೆ ಹಾಗೂ ಬಳಿಕ ಉತ್ಸವ ನಡೆಯಲಿದೆ.

ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಗುರುರಾಜ ಸೋಮಯಾಜಿ ಬೃಹ್ಮನಜೆಡ್ಡು ನೇರಳಕಟ್ಟೆ ಅವರ ನೇತೃತ್ವದಲ್ಲಿ ನಡೆಯಲಿವೆ ಎಂದು ದೇವಸ್ಥಾನ ಟ್ರಸ್ಟ್ ತಿಳಿಸಿದೆ.

ನವರಾತ್ರಿ ವಿಶೇಷ ದಿನಗಳಲ್ಲಿ ಭಕ್ತರು ದುರ್ಗಾಹೋಮ, ದುರ್ಗಾಪಾರಾಯಣ, ನವರಾತ್ರಿ ಪೂಜೆ, ಚಂಡಿಕಾ ಹೋಮ ಹಾಗೂ ನವಚಂಡಿ ಹೋಮ ಸೇರಿದಂತೆ ವಿವಿಧ ಸೇವೆಗಳನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ನವರಾತ್ರಿಯ ಕೊನೆಯ ದಿನ ಕ್ಷೇತ್ರದ ವತಿಯಿಂದ ವಿಶೇಷ ಚಂಡಿಕಾ ಹೋಮ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಜಯರಾಮ ಸ್ವಾಮಿ ಮನವಿ ಮಾಡಿದ್ದಾರೆ.

ಇದೇ ವೇಳೆ, ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವವು ಮಾಘ ಮಾಸದ ಉತ್ತರ ನಕ್ಷತ್ರದಂದು ನಡೆಯಲಿದ್ದು, 2027ರ ಫೆಬ್ರವರಿ 23ರಂದು ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ