ಉಡುಪಿ : ಪೆರ್ಡೂರು ಕಡೆಯಿಂದ ಹಿರಿಯಡಕ ಕಡೆಗೆ 4 ಜಾನುವಾರುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಬೋಲೇರೊ ಟೆಂಪೋ ಗೂಡ್ಸ್ ವಾಹನ ವಶಕ್ಕೆ ಪಡೆದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕುರ್ಕಾಲು ನಿವಾಸಿ ಸುಹಾಸ್(21), ಕಾಪು ಭಾರತ ನಗರ ನಿವಾಸಿ ಲವ ಶೆಟ್ಟಿ (64) ಬಂಧಿತರು. ಇವರು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಅನಧಿಕೃತವಾಗಿ ಆಹಾರ ನೀರು ನೀಡದೆ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಕೊಂಡು ಕಸಾಯಿಖಾನೆಗೆ ಮಾಂಸ ಮಾಡುವ ದುರುದ್ದೇಶದಿಂದ ವಾಹನದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾಗ ವಾಹನ ಪಕ್ಕಾಲು ಹೆಬ್ಬಾರು ಸೇತುವೆ ಹತ್ತಿರ ಚರಂಡಿಗೆ ಇಳಿದಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ 4 ಜಾನುವಾರುಗಳು ಪತ್ತೆಯಾಗಿದ್ದವು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

