34 ನೇ  ಅಖಿಲ ಭಾರತೀಯ ಕೊಂಕಣಿ ಅಧಿವೇಶನ ಉದ್ಘಾಟನಾ ಸಮಾರಂಭ

0
6

ಮಹಾರಾಷ್ಟ್ರದ ಪೂಣೆಯ ‘ಯಶವಂತ ರಾವ್ ಚೌಹಾಣ್’ ಸಭಾಂಗಣದಲ್ಲಿ ಅಖಿಲ ಭಾರತೀಯ ಕೊಂಕಣಿ ಪರಿಶದ್ ನ ನೇತೃತ್ವದಲ್ಲಿ ಜರುಗಿದ 34 ನೇ  ಅಖಿಲ ಭಾರತೀಯ ಕೊಂಕಣಿ ಅಧಿವೇಶನವನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ ರವರು ಉದ್ಘಾಟಿಸಿದರು.   

ಈ ಸಂಧರ್ಭದಲ್ಲಿ ಪುಣೆ ಅಧಿವೇಶನ ಅಧ್ಯಕ್ಷ ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ ಎ ನಂದಗೋಪಾಲ ಶೆಣೈಯವರು ಕೊಂಕಣಿ ಪರಿಶದ್ ನ 2026 –  28  ನೇ ಸಾಲಿನ ಗೌರವ ಅಧ್ಯಕ್ಷರಾಗಿ ಆಯ್ಕೆಯಾದುದಕ್ಕೆ ಮುಖ್ಯಮಂತ್ರಿಗಳು ಸನ್ಮಾನಿಸಿದರು.

ಹಾಗೂ ಈ ಸಂಧರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಪ್ರಕಾಶನದ “ಗೋವಾದ ಮಾತೃದೇವತೆಯರ ಉಪಾಸನೆ” ಕಾಫಿ ಟೇಬಲ್ ಪುಸ್ತಕವನ್ನು  ಬಿಡುಗಡೆಗೊಳಿಸಲಾಯಿತು.

ಪರಿಷದ್ ನ  ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ, ಕಾರ್ಯದರ್ಶಿ  ಸ್ನೇಹಾ ಸಬ್ನೀಸ್,  ಸ್ವಾಗತಾಧ್ಯಕ್ಷೆ ಡಾ ಅಶ್ವಿನಿ ಜಾಂಭೆಕಾರ್ ಕುಲಕರ್ಣಿ, ವಿಶೇಷ ಆಹ್ವಾನಿತೆ ಸಾಹಿತಿ ಅರೂಣಾ ಡೆರೆ, ವರ್ಧನಿಯ ಪ್ರವರ್ತಕಿ ಉಷಾ ಶೆಣೈ, ಅನ್ನು ಪುಂದಲೀಕ ಪೈ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.