ಮಂಗಳೂರು: ಹೊಸ ಶೈಕ್ಷಣಿಕ ವರ್ಷದ ಆರಂಭವು ಕೇವಲ ಕಾಲೇಜು ಅಥವಾ ಪುಸ್ತಕಗಳ ಬದಲಾವಣೆಯಲ್ಲ; ಅದು ವಿದ್ಯಾರ್ಥಿಗಳ ಬದುಕಿನ ಹೊಸದೊಂದು ಅಧ್ಯಾಯದ ಮುನ್ನುಡಿ. ಈ ಆರಂಭವು ಕೇವಲ ತೋರಿಕೆಯ ಸಂಭ್ರಮವಾಗದೆ, ಅರ್ಥಪೂರ್ಣವಾದ ಸಿದ್ಧತೆಯಾಗಬೇಕಿರುವುದು ಇಂದಿನ ಅಗತ್ಯ. ಪದವಿ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇದು ನಿಮ್ಮ ಭವಿಷ್ಯವನ್ನು ನಿರ್ಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ. ಫಾ ಐವನ್ ಮೈಕೆಲ್ ರೋಡ್ರಿಗಸ್ ತಿಳಿಸಿದರು.
ಇವರು ಸೋಮವಾರ ಮಿಲಾಗ್ರಿಸ್ ಕಾಲೇಜಿನ ಪದವಿ ವಿದ್ಯಾರ್ಥಿಗಳ ನೂತನ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾoಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೊ 2026-27 ನೇ ಶೈಕ್ಷಣಿಕ ವರ್ಷದ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ನೂತನ ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪಾದುವ ಪದವಿ ಪೂರ್ವ ಕಾಲೇಜಿನ ಪ್ರಾoಶುಪಾಲರಾದ ರೋಶನ್ ಸಾಂತುಮಾಯೋರ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕರು, ಬೋಧಕೇತರ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜ್ ನ ಉಪಪ್ರಾoಶು ಪಾಲರಾದ ಗ್ಲಾನ್ಸಿಯಾ ಫರ್ನಾಂಡಿಸ್, ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಶೈಲಾ ಮೋರಸ್ ವಂದಿಸಿದರು. ಉಪನ್ಯಾಸಕಿ ಪ್ರಿಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.

