
ಹಿಂದು ವಿದ್ಯಾದಾಯಿನೀ ಸಂಘದ ಆಡಳಿತ ಕ್ಕೆ ಒಳಪಟ್ಟ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಿರ್ಮಾಣ ಗೊಂಡ,ಆಡಳಿತ ಮಂಡಳಿಯ ಸಹಕಾರ ಮಾರ್ಗದರ್ಶನ, ಶಾಲಾಭಿವೃದ್ಧಿ ಸಮಿತಿಯ ನೇತೃತ್ವ, ಹಳೆ ವಿದ್ಯಾರ್ಥಿ ಸಂಘದ ನೆರವು,ಊರ ಮಹನೀಯರ ವಿದ್ಯಾಭಿಮಾನಿಗಳ ಸಹಕಾರ ದೊಂದಿಗೆ ಶಾಲೆಯ ಪ್ರಾಂಗಣ ದ ನೂತನ ಶೀಟುಅಳವಡಿಕೆಯ ಶ್ರೀ ವೆಂಕಟ್ರಮಣ ವಿದ್ಯಾಂಗಣ ದ ಉಧ್ಘಾಟನಾ ಸಮಾರಂಭ ವು ದಿನಾಂಕ 18/10/2026 ನೇ ಆದಿತ್ಯವಾರ ದಂದು ಜರಗಿತು.
ಉಧ್ಘಾಟನೆಯು ಪವನ್ ಮೈರ್ಪಾಡಿ ಯವರ ನೇತೃತ್ವದಲ್ಲಿ ಗಣಹೋಮ ದೊಂದಿಗೆ, ಹಿರಿಯರು ಮಾರ್ಗದರ್ಶಕರಾದ ಯಚ್.ಯು.ಅನಂತಯ್ಯನವರ ದಿವ್ಯ ಹಸ್ತದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ರೇಷ್ಮೆ ಬಟ್ಟೆ ಪಟ್ಟಿ (ರಿಬ್ಬನ್ )ಕತ್ತರಿಸಿ ಒಳ ಪ್ರವೇಶಿಸುವ ಮೂಲಕ ಉದ್ಘಾಟನೆಯು ನೆರವೇರಿತು.ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಪ್ರಾರ್ಥನೆಯೊಂದಿಗೆ, ದೀಪವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಶ್ರೀಧರ್ ಯಚ್ ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ಬೆಳಗಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಜಯಚಂದ್ರ ಹತ್ವಾರ್ ವಹಿಸಿ ದಾನಿಗಳ ನೆರವಿನಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಮಾಣಗೊಂಡ ಶೀಟು ಅಳವಡಿಕೆಯ ಕಾರ್ಯವನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿಗಳಾದ ಶ್ರೀ ಶ್ರೀರಂಗ, ಉಪಾಧ್ಯಕ್ಷರಾದ ಟಿ.ಯನ್ ರಮೇಶ್, ಕೋಶಾಧಿಕಾರಿಗಳಾದ ಯಚ್ ಎಲ್ ರಾವ್, ಜೊತೆ ಕಾರ್ಯದರ್ಶಿ ಎಂ ಜಿ ರಾಮಚಂದ್ರ,ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಹೆಚ್ ವಿ, ಉಪಾಧ್ಯಕ್ಷರಾದ ಪ್ರಕಾಶ್ ಯಸ್ ಕರ್ಕೇರ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಕುಳಾಯಿ, ಶಾಲಾಭಿವೃದ್ಧಿ ಸಮಿತಿ ಸಂಚಾಲಕರು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಯೋಗೀಶ್ ಸನಿಲ್ ಕುಳಾಯಿ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಶೀಟು ಅಳವಡಿಕೆಯ ಸಂಪೂರ್ಣ ಉಸ್ತುವಾರಿ ವಹಿಸಿ ಸುಂದರ ಮತ್ತು ಗಟ್ಟಿಯಾಗಿ ರೂಪುಗೊಳಿಸಿದ ಮತ್ತು ದಾನಿಗಳಿಂದ ನೆರವು ಸಂಗ್ರಹಿಸಲು ಶ್ರಮಿಸಿದ ಪ್ರಕಾಶ್ ಯಸ್ ಕರ್ಕೇರ, ಪ್ರಭಾಕರ್ ಕುಳಾಯಿ, ಯೋಗೀಶ್ ಸನಿಲ್ ಕುಳಾಯಿ, ಶ್ರೀನಿವಾಸ ಕುಳಾಯಿ, ಶ್ರೀಧರ್ ಯಚ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾತ್ರವಲ್ಲದೆ ಶೀಟು ಅಳವಡಿಸಲು ಕೈ ಜೋಡಿಸಿದ ಎಲ್ಲಾ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಸಂಚಾಲಕಿ ಕೆ ಕಲಾವತಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಗಮಿಸಿದ ಎಲ್ಲಾ ಗಣ್ಯರನ್ನು ಶಾಲಾ ಮುಖ್ಯ ಶಿಕ್ಷಕ ರಾದ ಗೋಪಾಲ್.ವಿ ಸ್ವಾಗತಿಸಿದರು . ಕಾರ್ಯಕ್ರಮ ವನ್ನು ಸಹಶಿಕ್ಷಕರ ರಾದ ಭಾಸ್ಕರ ಕೆ ನಿರೂಪಿಸಿ ದರು.
ಸಹಶಿಕ್ಷಕ ಶ್ರೀ ಮಲಕಪ್ಪ ಧನ್ಯವಾದ ಗೈದರು.ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಮಕ್ಕಳ ಹೆತ್ತವರು, ಶಾಲೆಯ ಅಧ್ಯಾಪಕ ವೃಂದದವರು,ಅಧ್ಯಪಕೇತರ ಸಿಬ್ಬಂಧಿಗಳು, ಅಡುಗೆ ಸಿಬ್ಬಂದಿ ಯವರು, ಮಕ್ಕಳ ಪೋಷಕರು, ಮಕ್ಕಳು ಭಾಗವಹಿಸಿದ್ದರು.
