ನೂತನವಾಗಿ ಆರಂಭಗೊಂಡಿರುವ ಆರೋಗ್ಯ ಸರ್ಜಿಕಲ್ ಪಾಯಿಂಟ್ ಸಂಸ್ಥೆಯ ಶುಭಾರಂಭ ಸಮಾರಂಭ

0
10

ಕಾರ್ಕಳದಲ್ಲಿ ನೂತನವಾಗಿ ಆರಂಭಗೊಂಡಿರುವ ಆರೋಗ್ಯ ಸರ್ಜಿಕಲ್ ಪಾಯಿಂಟ್ ಸಂಸ್ಥೆಯ ಶುಭಾರಂಭ ಸಮಾರಂಭವು ಅಕ್ಟೋಬರ್ 26ರಂದು ನಡೆಯಿತು.

ಕಾರ್ಕಳದ ಸರ್ಕಾರಿ ಆಸ್ಪತ್ರೆಯ ಸಮೀಪದ ಹೆರಿಟೇಜ್ ಹೈಟ್ಸ್ ಕಟ್ಟಡದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಂಡ ಸಂಸ್ಥೆಯನ್ನು ಪೂಜ್ಯ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ನೆಲ್ಲಿ ಇದರ ಆಡಳಿತ ಮೊಕ್ತೇಸರರಾದ ಸುನಿಲ್ ಕೆ.ಆರ್ ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರೇಷ್ಮಾ ಉದಯ ಶೆಟ್ಟಿ ಇನ್ನಾ, ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂತೂರು ಇಲ್ಲಿನ ಆಡಳಿತ ಮೊಕ್ತೇಸರರಾದ ಸುಧೀರ್ ರಾವ್, ಕಾರ್ಕಳ ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಮಾ ಕೇಶವ್, ಸಂಸ್ಥೆಯ ಮಾಲಕರಾದ ಪ್ರಶಾಂತ್ ಕೋಟ್ಯಾನ್, ಮೇಘನ ಪ್ರಶಾಂತ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ಆಸ್ಪತ್ರೆ ಉಪಕರಣಗಳ ಮಾರಾಟ ಹಾಗೂ ಬಾಡಿಗೆ ಸೇವೆ

ಆರೋಗ್ಯ ಸೇವಾ ಕ್ಷೇತ್ರಕ್ಕೆ ಅಗತ್ಯವಿರುವ ವಿವಿಧ ವೈದ್ಯಕೀಯ ಉಪಕರಣಗಳು ಮತ್ತು ರೋಗಿಗಳ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಆರೋಗ್ಯ ಸರ್ಜಿಕಲ್ ಪಾಯಿಂಟ್ ಸಂಸ್ಥೆಯು ಗ್ರಾಹಕರಿಗೆ ಒದಗಿಸುತ್ತಿದೆ.
ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸಾ ಉಪಕರಣಗಳು, ಮೂಳೆ ಚಿಕಿತ್ಸೆಗೆ ಅಗತ್ಯವಿರುವ ಆರ್ಥೋಪೆಡಿಕ್ ಸಪೋರ್ಟ್‌ಗಳು, ಆಸ್ಪತ್ರೆಯ ಪೀಠೋಪಕರಣಗಳು, ವೀಲ್‌ಚೇರ್‌ಗಳು, ವಾಕರ್‌ಗಳು, ರಕ್ತದೊತ್ತಡ ಪರೀಕ್ಷಾ ಯಂತ್ರಗಳು, ಗ್ಲುಕೋಮೀಟರ್‌ಗಳು, ನೆಬ್ಯುಲೈಜರ್‌ಗಳು, ಪಲ್ಸ್ ಆಕ್ಸಿಮೀಟರ್‌ಗಳು ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳು ಲಭ್ಯವಿವೆ.
ಇದರೊಂದಿಗೆ ರೋಗಿಗಳ ಮನೆಯ ಆರೈಕೆಗೆ ಅಗತ್ಯವಿರುವ ಉತ್ಪನ್ನಗಳು, ವಯಸ್ಕರ ಡೈಪರ್‌ಗಳು ಹಾಗೂ ಇತರ ವೈದ್ಯಕೀಯ ಬಳಕೆಯ ಸಾಮಗ್ರಿಗಳನ್ನೂ ಸಂಸ್ಥೆ ಒದಗಿಸುತ್ತಿದೆ.

ವೈದ್ಯಕೀಯ ಉಪಕರಣಗಳು ಬಾಡಿಗೆಗೂ ಲಭ್ಯ

ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮತ್ತು ವೃದ್ಧರಿಗೆ ಅನುಕೂಲವಾಗುವಂತೆ ಆಸ್ಪತ್ರೆಯ ಹಾಸಿಗೆಗಳು, ವೀಲ್‌ಚೇರ್‌ಗಳು, ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳು, ಸಿಪ್ಯಾಪ್ (CPAP) ಮತ್ತು ಬಿಪ್ಯಾಪ್ (BPAP) ಯಂತ್ರಗಳು ಹಾಗೂ ಸಕ್ಷನ್ ಯಂತ್ರಗಳನ್ನು ಬಾಡಿಗೆಗೆ ಪಡೆಯುವ ಸೌಲಭ್ಯವಿದೆ.

ಗುಣಮಟ್ಟದ ಉತ್ಪನ್ನಗಳು, ಕೈಗೆಟುಕುವ ಬೆಲೆ ಹಾಗೂ ವಿಶ್ವಾಸಾರ್ಹ ಸೇವೆಯನ್ನು ಒದಗಿಸುವ ಮೂಲಕ ಗ್ರಾಹಕರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವುದು ಸಂಸ್ಥೆಯ ಉದ್ದೇಶವಾಗಿದೆ.