ಪ್ರತಿಭೆಗೆ ಅವಕಾಶ ಸಿಕ್ಕಿದಾಗ ಬೆಳಗಲು ಸಾಧ್ಯ : ರುಕ್ಮಯ ಪೂಜಾರಿ

0
5

ಕಲ್ಲಡ್ಕ : ಯಾವುದೇ ಒಂದು ಪ್ರತಿಭೆಗೆ ಅವಕಾಶ ಸಿಕ್ಕಾಗ ಅದು ಬೆಳಗಳು ಸಾಧ್ಯ ಎಂದು ಮಾಜಿ ಶಾಸಕ ರುಕ್ಮಿಣಿ ಪೂಜಾರಿ ಹೇಳಿದರು.

ಅವರು ನಂಬರ್ 17 ಮಂಗಳವಾರ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ 2026 -27 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ. ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ಅದ್ಭುತ ಪ್ರತಿಭೆ ಅಡಗಿರುತ್ತದೆ. ಕೆಲವರ ಪ್ರತಿಭೆ ಮಾತಿನಲ್ಲಿ ಅರಳಿದರೆ, ಇನ್ನು ಕೆಲವರ ಪ್ರತಿಭೆ ಹಾಡು, ನೃತ್ಯ, ಚಿತ್ರಕಲೆ, ಅಭಿನಯ, ಕ್ರೀಡೆ, ಬರವಣಿಗೆ ಹೀಗೆ ವಿಭಿನ್ನ ರೂಪಗಳಲ್ಲಿ ಅನಾವರಣಗೊಳ್ಳುತ್ತದೆ.

ಮಕ್ಕಳ ಪ್ರತಿಭೆಯನ್ನು ಅಳೆಯಲು ಅಂಕಗಳೇ ಮಾನದಂಡವಲ್ಲ. ಪ್ರತಿಯೊಂದು ಮಗುವಿಗೂ ತನ್ನದೇ ಆದ ಸಾಮರ್ಥ್ಯವಿದೆ, ತನ್ನದೇ ಆದ ಕನಸಿದೆ, ತನ್ನದೇ ಆದ ಸಾಧನೆಯ ಹಾದಿಯಿದೆ. ಅಂತಹ ಅವಕಾಶವನ್ನು ಕಲ್ಪಿಸಿ ಕೊಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಧುಸೂದನ್ ಐತಲ್ ವಹಿಸಿದ್ದರು.

ಬಂಟ್ವಾಳ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್ ಮಾತನಾಡಿ ಪ್ರತಿಭಾ ಸ್ಪರ್ಧೆ ಎಂಬುದು ಕೇವಲ ಗೆಲ್ಲುವ ಮತ್ತು ಸೋಲುವ ವೇದಿಕೆಯಲ್ಲ. ಇದು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವ, ಆತ್ಮವಿಶ್ವಾಸವನ್ನು ಬೆಳೆಸುವ ಮತ್ತು ಅವರ ಕನಸುಗಳಿಗೆ ರೆಕ್ಕೆ ನೀಡುವ ಸುಂದರ ಅವಕಾಶವಾಗಿದೆ.ಎಂದರು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಪದ್ಮನಾಭ ರೈ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಐಡಾ ಸುರೇಶ್, ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಂದನ್ ಜೈನ್, ಸದಸ್ಯರಾದ ಸುರೇಶ್, ನವೀನ್ ಅಬ್ಬು ಬಕ್ಕರ್, ಅಮೀದ್ ಆಲಿ, ನಜೀರ್, ಮೊದಲಾದವರು ಉಪಸ್ಥಿತರಿದ್ದರು.

ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಸ್ವಾಗತಿಸಿ, ಕ್ಲಸ್ಟರ್ ಸಿ ಆರ್ ಪಿ ಜೋತಿ ಪ್ರಾಸ್ತಾವಿಕ ಮಾಡಿ, ಶಿಕ್ಷಕಿ ವಂದಿಸಿದರು. ಶಿಕ್ಷಕ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.