
ಮೂಡುಬಿದ್ರೆ: ಜವನೇರ್ ಬೆದ್ರ ಫೌಂಡೇಶನ್(ರಿ), ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವಚೇತನ ಶಿಬಿರದ ಉದ್ಘಾಟನಾ ನಡೆಯಿತು. ಯೋಗ ಪ್ರಾಣಾಯಾಮ, ಧ್ಯಾನ, ಜ್ಞಾನ/ ಆಟಗಳು ಹಾಗೂ ತರಬೇತಿ ಐದು ದಿನದ ಶಿಬಿರದಲ್ಲಿ ನಡೆಯಲಿದೆ. ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕಿ ಸುನಿತಾ ಉದಯ್, ನಿವೃತ್ತ ಶಿಕ್ಷಕಿ ಪ್ರೇಮ s ರಾವ್ , ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನ ನಾಯಕ್, ಮಾರ್ಗದರ್ಶಕಿ ಸುಮಲತಾ ಶೆಟ್ಟಿ, ಪ್ರಮುಖರಾದ ಅಮಿತಾ ಬನ್ನಡ್ಕ, ಸುಕನ್ಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸಾರಿಕ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

42 ಶಿಬಿರಾರ್ಥಿಗಳು 5 ದಿನಗಳು ನಡೆಯುವ ವಿಶೇಷ ಯೋಗ ಶಿಬಿರದಲ್ಲಿ ಭಾಗವಹಿಸಿ ಹೆಸರು ದಾಖಲಿಸಿದ್ದಾರೆ. ಜವನೆರ್ ಬೆದ್ರ ಫೌಂಡೇಶನ್ (ರಿ)ಅಧ್ಯಕ್ಷ ಅಮರ್ ಕೋಟೆ, ಜವನೆರ್ ಬೆದ್ರ ಯುವ ಸಂಘಟನೆ ಸಂಚಾಲಕ ನಾರಾಯಣ ಪದುಮಲೆ, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಬಿ. ಪೂಜಾರಿ ಉಪಸ್ಥಿತರಿದ್ದರು.