Thursday, May 1, 2025
HomeUncategorizedಮಲ್ಪೆ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

ಮಲ್ಪೆ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

ಮಲ್ಪೆ: ಜಾಮೀಯಾ ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವ ಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಮಸೀದಿಗೆ ಸಂಬಂಧಿಸಿದ ಎರಡು ಮಹಡಿಯ ಕಟ್ಟಡದಲ್ಲಿರುವ ಕೆಲಸಗಾರರಿಗೆ ಕಟ್ಟಡ ಬದಿಯಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಅಲ್ಲಿ ಎ.14ರ ಅಪರಾಹ್ನ ಒಂದು ಗಂಟೆ ಸುಮಾರಿಗೆ ನವಜಾತ ಶಿಶುವಿನ ದೇಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಸೀದಿಯ ವ್ಯವಸ್ಥಾಪಕ ಸುಹೇಲ್ ಅವರು ಶೌಚಾಲಯಕ್ಕೆ ಹೋದಾಗ ಈ ಮೃತದೇಹ ಕಂಡುಬಂದಿದ್ದು, ತಕ್ಷಣವೇ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರು ಶಿಶು ಜನನಕ್ಕೆ ಮೊದಲೇ ಅಥವಾ ಬಳಿಕ ಮೃತಪಟ್ಟಿದ್ದು, ಯಾರೋ ಅಪರಿಚಿತರು ಮಗುವಿನ ಜನನವನ್ನು ಮರೆಮಾಚಲು ಯತ್ನಿಸಿ ಇಲ್ಲಿ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular