ಅ.9ರಂದು ಮೂಡುಬಿದಿರೆಯಲ್ಲಿ ಅಂತರ್‌ಕಾಲೇಜು ಭಾಷಣ ಸ್ಪರ್ಧೆ

0
5

‘ಮಹಾತ್ಮ ಗಾಂಧೀಜಿಯಿಂದ ವಿಕಸಿತ ಭಾರತದೆಡೆಗೆ’ ವಿಷಯದ ಕುರಿತು ಸ್ಪರ್ಧೆ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ ವತಿಯಿಂದ ಎಸ್.ಡಿ. ಸಾಮ್ರಾಜ್ಯ ಸ್ಮಾರಕದ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್‌ಕಾಲೇಜು ಭಾಷಣ ಸ್ಪರ್ಧೆಯು ಅಕ್ಟೋಬರ್ 9ರಂದು ಕಾಲೇಜಿನಲ್ಲಿ ನಡೆಯಲಿದೆ.

‘ಮಹಾತ್ಮ ಗಾಂಧೀಜಿಯಿಂದ ವಿಕಸಿತ ಭಾರತದೆಡೆಗೆ: ಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ’ ಎಂಬ ವಿಷಯದ ಕುರಿತು ಸ್ಪರ್ಧಿಗಳು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ಕಾರ್ಯಕ್ರಮವನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಮೂಡುಬಿದಿರೆಯ ವಕೀಲ ವಿಶಾಲ್‌ಕುಮಾರ್ ಎಂ. ಉದ್ಘಾಟಿಸಲಿದ್ದಾರೆ. ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉಪಸ್ಥಿತರಿರಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್ ಕೊಡಂಗಲ್ಲು ಶಾಖೆಯ ಶಾಖಾ ವ್ಯವಸ್ಥಾಪಕ ಗ್ರಹಾಂ ಮನೋಜ್ ಡಿಸೋಜ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.