ವೀಲ್ ಚೇರ್ ಹಸ್ತಾಂತರ

0
9

ಚಿಕ್ಕಮಂಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಬೇಡ್ಕರ್ ನಗರ ದ ನಿವಾಸಿ ಉಮೇಶ್ ಮತ್ತು ಶಕೀಲಾ ಅವರ ಮಗು ನಿಹಾಲ್ ಗೆ ವೀಲ್ ಚೇರ್ ವಿತರಣೆ
ದಿನಾಂಕ 10-07-2026 ಶುಕ್ರವಾರದಂದು ಶ್ರೀ ಚಾಮುಂಡೇಶ್ವರಿ ಮತ್ತು ಬಾರಗೇಶ್ವರ ದೇವಸ್ಥಾನ ಬಾಪುನಗರ ಮೂಡಿಗೆರೆ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಿಹಾಲ್ ಮಗುವಿನ ತಾಯಿವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನಾಗೇಶ್ ಗುರಿಕಾರ, ಅಣ್ಣಪ್ಪ ಅರ್ಚಕರು,ರೋಶನ್ ಅಮೀನ್ ಅರ್ಚಕರು, ಕೃಷ್ಣ ಕುಳಾಯಿ (ಹೆಲ್ಪ್ ಲೈನ್ ಪ್ರಮುಖರು) ,ಮಂಜುನಾಥ್ ಕುನ್ನಹಳ್ಳಿ, ಕುಮಾರ್ ಟೈಲರ್,ಅಜೀತ್. ಕೀರ್ತಿ, ಮಹೇಶ್ ಅಮೀನ್ (ಹೆಲ್ಪ್ ಲೈನ್ ಸ್ಥಾಪಕರು.),ಕೃಷ್ಣಪ್ಪ ಆನೆದಿಬ್ಬ,ಹರೀಶ್ ಆನೆದಿಬ್ಬ,ಸುಂದರ ಪಾತ್ರಿ ಪಡುಬಿದ್ರೆ, ಸುರೇಶ್ ಎಚ್. ಬಿ,
ಗಿರಿಜಾ ನಾಗೇಶ್ ಮತ್ತು ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

ವಿ.ಸೂ:- ಖಂಡಿತವಾಗಿಯೂ ಈ ಒಂದು ಪೋಸ್ಟ್ ಪ್ರಚಾರಕ್ಕಾಗಿ ಅಲ್ಲ ಸಹಾಯ ಮಾಡುವ ಯುವಕರಿಗೆ ಪ್ರೇರಣೆಗಾಗಿ ಮಾತ್ರ.

ಈ ಪುಣ್ಯ ಕಾರ್ಯದಲ್ಲಿ ಸಹಕರಿಸಿದ ಅಶೋಕ್ ಕೊಡಕಲ್ ಮತ್ತು ಹೆಲ್ಪ್ ಲೈನ್ ಸೇವಾ ತಂಡದ ಎಲ್ಲಾ ಸದಸ್ಯರಿಗೆ ಆ ದೇವರು ದೈವಾನುಗ್ರಹ ಪ್ರಾಪ್ತಿಸಲಿ, ಭಗವಂತ ಸರ್ವರಿಗೂ ಒಳಿತನ್ನು ಕರುಣಿಸಲಿ.

– ಹೆಲ್ಪ್ ಲೈನ್ ಸೇವಾ ತಂಡ

LEAVE A REPLY

Please enter your comment!
Please enter your name here