ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು 2025ನೇ ಜೂನ್ 22ರಂದು ನಡೆಯಲಿದೆ.
ಈ ಸಮಾರಂಭದ ಆಮಂತ್ರಣ ಪತ್ರವನ್ನು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ನಿಯೋಜಿತ ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್, ನಿಯೋಜಿತ ಕಾರ್ಯದರ್ಶಿ ಮಧುಸೂದನ್ ಮದ್ವ, ನಿರ್ದೇಶಕ ಲೋಹಿತ್ ಕನಪಾದೆ, ಚಿನ್ನಾ ಕಲ್ಲಡ್ಕ, ಸುನೀತಾ ಮಾರ್ನಬೈಲ್ ಮಾಜಿ ಅದ್ಯಕ್ಷರುಗಳಾದ ರಾಮಚಂದ್ರ ಸುವರ್ಣ ತುಂಬೆ, ಪ್ರೇಮನಾಥ್ ಕರ್ಕೇರಾ, ರಾಜೇಶ್ ಸುವರ್ಣ, ನಾಗೇಶ್ ಪೊನ್ನೋಡಿ, ಗಣೇಶ್ ಪೂಂಜೆರೆಕೋಡಿ, ಹರೀಶ್ ಕೋಟ್ಯಾನ್ ಕುದನೆ, ಅರ್ಚಕರಾದ ಪ್ರಶಾಂತ್ ಶಾಂತಿ ಉಪಸ್ಥಿತರಿದ್ದರು.