ಕೇಂದ್ರ ಸರಕಾರ ರಾಜ್ಯ ಸರ್ಕಾರಗಳು ಯಾವುದೇ ಇದ್ದರೂ ಕೂಡ ಸ್ಥಳೀಯವಾದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ ವ್ಯವಸ್ಥೆಯಿಂದ ನಾಗರಿಕರು, ನಾಗರಕಟ್ಟೆ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಈ ಬಗ್ಗೆ ಆ ಪರಿಸರದಲ್ಲಿರುವ ಜನಪ್ರತಿನಿಧಿಗಳು, ಪತ್ರಿಕಾ ವರದಿಗಾರರು, ಮುಖಂಡರುಗಳು ಹಲವಾರು ಬಾರಿ ಹಿಂದಿನ, ಇಂದಿನ ಶಾಸಕರಲ್ಲಿ, ಅಧಿಕಾರಿಗಳಲ್ಲಿ ವಿಷಯವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿದರು ಕೂಡ ಪರಿಣಾಮ ಶೂನ್ಯ.
ಕಳೆದ ಎರಡು ವರ್ಷಗಳಿಂದ ಟೆಂಡರ್ ಆಗಿದೆ, ಕಾಮಗಾರಿ ಪ್ರಾರಂಭವಾಗಬೇಕು ಎನ್ನುವ ಸಬೂಬನ್ನು ಹೇಳುತ್ತಿರುವ ಜನಪ್ರತಿನಿಧಿಗಳು, ಶಾಸಕರು ಈ ಬಗ್ಗೆ ಗಮನ ಹರಿಸದೆ ಇರುವುದು ಕಂಡುಬರುತ್ತಿದೆ. ಏಕೆಂದರೆ ಉದ್ಘಾಟನೆ, ಶಂಕುಸ್ಥಾಪನೆ ಯಲ್ಲಿಯೇ ದಿನಗಳು ಉರುಳುತ್ತಿರುವಾಗ ನಾಗರಿಕರ, ನಗರದ ಅಭಿವೃದ್ಧಿಗೆ ಸಮಯವೆಲ್ಲಿ?ಎಷ್ಟರಮಟ್ಟಿಗೆ ಎಂದರೆ ಹಳೆಯ ಬಸ್ಸು ನಿಲ್ದಾಣಕ್ಕೂ ಹೊಸ ಬಸ್ಸು ನಿಲ್ದಾಣಕ್ಕೂ ಮಧ್ಯದಲ್ಲಿರುವ ಒಳಚರಂಡಿಯ ಮೇಲು ಹಾಸುಗಳು ತುಂಡಾಗಿ ಹಲವಾರು ಮಂದಿಯ ಕೈಕಾಲುಗಳಿಗೆ ಪೆಟ್ಟಾಗಿ ಎರಡು ವರ್ಷಗಳೇ ಕಳೆದಿರುವುದು ಗೊತ್ತಿದ್ದರೂ ಕೂಡ ಕನಿಷ್ಠಪಕ್ಷ ಕೆಲವು ಸಾವಿರಗಳಲ್ಲಿ ಆಗುವ ಈ ಕಾಮಗಾರಿಯನ್ನು ನಡೆಸಲೂ ಇವರಿಗೆ ಬುದ್ಧಿ ಇಲ್ಲ, ಕಾಮಗಾರಿ ಕೈಗೊಳ್ಳಲು ಪುರಸಭಾ ಮುಖ್ಯಾಧಿಕಾರಿ ಗಳಿಗೆ ಮನಸ್ಸಿಲ್ಲ.
ತಾಕತ್ತಿಲ್ಲ ಎನ್ನುವುದನ್ನು ಹೇಳಲು ಸಾಧ್ಯವಿಲ್ಲದ ಕಾರಣದಿಂದಾಗಿ ಬುದ್ಧಿ ಇಲ್ಲ ಎಂದು ಹೇಳಬೇಕಾಗಿದೆ. ಕೇವಲ ಉದ್ಘಾಟನೆ, ಶಂಕು ಸ್ಥಾಪನೆಯಲ್ಲಿ ಮುಳುಗಿರುವ ಜನಪ್ರತಿನಿಧಿಗಳು ಜನೋಪಯೋಗಿ ಕಾರ್ಯಗಳನ್ನು ಮಾಡಲು, ಮುಂದುವರಿಸಲು ಆಸಕ್ತಿ ವಹಿಸದೆ ಇರುವುದು ಬಹಳ ಖೇದಕರ ಸಂಗತಿ. ನಡೆದಾಡುವ ಮಾರ್ಗವನ್ನು ಆಕ್ರಮಿಸಿರುವ ಅಂಗಡಿ ಮುಂಗಟ್ಟುಗಳನ್ನು ವಿರುದ್ಧ ಕಾರ್ಯಾಚರಣೆಗೆ ಸ್ವತಹ ಜನ ಪ್ರತಿನಿಧಿಗಳು, ಮುಖ್ಯಾಧಿಕಾರಿಗಳೇ ತಡೆಯೊಡ್ಡುತ್ತಿದ್ದಾರೆಂದು ಪುರಸಭೆಯ ಒಳಹೊರಗು ತಿಳಿದು ನಾಗರಿಕರೇ ಸತ್ಯವನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ದ ಕಾರಣ ಕಳೆದ ನಾಲ್ಕಾರು ಮೀಟಿಂಗ್ ನಿಂದ ಯಾವುದೇ ನಿರ್ಣಯವೂ ಜಾರಿಗೆ ಬರದಿರುವುದು ಎಂದು ತಿಳಿಯಬಹುದಾಗಿದೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ

