ಸ್ವಾತಂತ್ರಂತ್ರ್ಯ ದಿನಾಚರಣೆಗೆ ಸೀಮಿತವಾಗದೇ ಭಾರತದ ಅಭಿಮಾನ ಹೃದಯದ ಆಳದಲ್ಲಿ ಇರಬೇಕು-ವಾಸುದೇವ ಎಲ್.ರಾಯ್ಕರ್

0
4


ದಾವಣಗೆರೆ-ಆಗಸ್ಟ್, ನಮ್ಮ ದಏಶದ ಸ್ವಾತಂತ್ರö್ಯ ಕೊಟ್ಟಿದ್ದು ಮಹಾತ್ಮಗಾಂಧಿ, ಅಂಬೇಡ್ಕರ್, ಸುಭಾಷ್‌ಚಂದ್ರಬೋಸ್ ಮುಂತಾದ ಹಿರಿಯರು ಕಠಿಣ ಪರಿಶ್ರಮದಿಂದ ಕಷ್ಟಪಟ್ಟಿದ್ದು ಶ್ಲಾಘನೀಯ. ಸ್ವಾತಂತ್ರö್ಯ ದಿನಾಚರಣೆಗೆ ಸೀಮಿತವಾಗದೇ ನಮ್ಮ ದೇಶಕ್ಕೆ ಸ್ವತಂತ್ರö್ಯ ಕೊಟ್ಟವರ ಹಿರಿಯರಿಗೆ ಸ್ಮರಣಿಸಬೇಕು. ಭಾರತದ ಅಭಿಮಾನ ನಮ್ಮ ನಿಮ್ಮೆಲ್ಲರ ಹೃಯದ ಆಳದಲ್ಲಿ ಇರಬೇಕು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಎಲ್.ರಾಯ್ಕರ್‌ರವರು ದಾವಣಗೆರೆಯ ಕಲಾಕುಂಚ ಕಛೇರಿಯ ಹೊರಾಂಗಣದಲ್ಲಿ ಸ್ವಾತಂತ್ರö್ಯ ದಿನಾಚರಣೆಯ ಭಾರತದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಮಾತನಾಡಿ, ನಮ್ಮ ದೇಶದಲ್ಲಿ ಯಾವುದೇ ಜಾತಿ, ಮತ, ಬೇಧವಿಲ್ಲದೇ ಇಡೀ ಪ್ರಪಂಚಕ್ಕೆ ನಮ್ಮ ದೇಶ ಖ್ಯಾತವಾಗಿದೆ ಎಂದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ, ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರ ಶ್ರೀಮತಿ ಪ್ರೇಮಾ ಮಹೇಶ್ವರಯ್ಯ, ಶ್ರೀಮತಿ ಮುಕ್ತಾ ಶ್ರೀನಿವಾಸ ಪ್ರಭು, ಚನ್ನಬಸವ ಶೀಲವಂತ, ಎಂ.ಎಸ್.ಪ್ರಸಾದ್, ವಿಜಯಕುಮಾರ್ ಶೆಟ್ಟಿ, ಅಬ್ದುಲ್ ಸತ್ತಾರ್‌ಸಾಬ್, ಶ್ರೀಮತಿ ಸವಿತಾ ವಿಜಯ ಕೂಲಂಬಿ, ಶ್ರೀಮತಿ ಲೀಲಾ ಸುಭಾಷ್, ಶ್ರೀಮತಿ ಸುಮಾ ಏಕಾಂತಪ್ಪ, ಶ್ರೀಮತಿ ಶಿಲ್ಪಾ ಉಮೇಶ್ ಮುಂತಾದವರು ಉಪಸ್ಥಿತರಿದ್ದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಾರಂಭದಲ್ಲಿ ಸ್ವಾಗತ ಮಾಡಿ, ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು. ಕಲಾಕುಂಚದ ಮಹಿಳೆಯರು ಸಾಮೂಹಿಕವಾಗಿ ದೇಶ ಭಕ್ತಿ ಗೀತೆಗಳನ್ನು ಹಾಡಿದರು.