ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR): ಕಾಂಗ್ರೆಸ್ ಪಕ್ಷದ ವತಿಯಿಂದ ಸಕ್ರಿಯ ಸಹಕಾರ ನೀಡಿ – ಬಿ.ಎಲ್.ಎ-2ಗಳಿಗೆ ಐವನ್ ಡಿ’ಸೋಜಾ ಕರೆ

0
5

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳಾದ (BLA-2) ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಕರೆ ನೀಡಿದರು.

ಇಂದು ನಡೆದ ಕಾಂಗ್ರೆಸ್ ಪಕ್ಷದ ವಾರ್ಡ್ ಮಟ್ಟದ ಕೋ-ಆರ್ಡಿನೇಟರ್‌ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿ.ಎಲ್.ಎ-2ಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎಸ್‌.ಐ.ಆರ್. ಪ್ರಕ್ರಿಯೆಯ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಮತದಾರರಿಂದ ಅಗತ್ಯ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಬಿ.ಎಲ್.ಒ.ಗಳಿಗೆ ಸಲ್ಲಿಸಿ, ಅದರ ಸ್ವೀಕೃತಿ (Acknowledgement) ಪಡೆಯುವಂತೆ ಮಾರ್ಗದರ್ಶನ ನೀಡಿ ಈ ಮಹತ್ವದ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀ ಪದ್ಮರಾಜ್ ಆರ್. ಪೂಜಾರಿ ಅವರು, ಮಾತನಾಡಿ ಮತದಾರರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳುವುದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಿದೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ಜನರಿಗೆ ಸರಿಯಾದ ಮಾಹಿತಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಸಹಕರಿಸಬೇಕು ಎಂದು ಕರೆ ನೀಡಿದರು ಐವನ್ ಡಿ’ಸೋಜಾ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಎಸ್‌.ಐ.ಆರ್. ಕಾರ್ಯಕ್ರಮದ ಕುರಿತು ನೀಡುತ್ತಿರುವ ತರಬೇತಿ ಹಾಗೂ ಸಂಘಟಿತ ಕಾರ್ಯಚಟುವಟಿಕೆ ಶ್ಲಾಘನೀಯವಾಗಿದ್ದು, ಇದರ ಮೂಲಕ ಬೂತ್ ಮಟ್ಟದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳಾದ (BLA-2) ಸದಸ್ಯರಿಗೆ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನಾಗೇಂದ್ರ ಕುಮಾರ್‌ ಅಶ್ರಫ್‌ ಬಜಾಲ್‌ ಅಮೃತ್‌ ಕದ್ರಿ, ಕವಿತಾ ವಾಸು ಗಿರೀಶ್‌ ಶೆಟ್ಟಿ,, ಚೇತನ್‌ ಕುಮಾರ್‌ ಆಲ್ಟ್ಟೀನ್‌, ನೀತು ಡಿಸೋಜಾ, ಹೊನ್ನಯ್ಯ, ಸತೀಶ್‌ ಪೆಂಗಲ್‌  ಮಂಜುಳಾ ನಾಯಕ್,  ಭಾಸ್ಕರ್ ರಾವ್, ಮನು ರಾಜ್‌  ವಿಜಯಲಕ್ಷ್ಮೀ, ದಿನೇಶ್‌ ರಾವ್‌ ಉಯೋಗೇಶ್‌ ನಾಯಕ್‌, ದುರ್ಗಾಪ್ರಸಾದ್‌, ಆಡ್ಲಿ ಸೈಮನ್‌ ಫಾರೂಕ್‌ ರಿತೇಶ್‌ ಶಕ್ತಿನಗರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here