ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ವಾರ್ಡಗಳಲ್ಲಿ ಕಳೆದ ವರ್ಷ ಸುರಿದ ವಿಪರೀತ ಮಳೆಯಿಂದ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಅನೇಕ ಕಾಮಗಾರಿಗಳು ಕುಸಿತಕ್ಕೆ ಒಳಪಟ್ಟು, ಕೃಷಿಕ ನೆರೆ ಉಂಟಾಗಿ ಅನೇಕ ಮನೆಗಳಿಗೆ ನೀರು ನುಗ್ಗಿ ಕೃಷಿಗೆ ಉಂಟಾದ ಕಾರ್ಯ ಚಟುವಟಿಕಗಳು ನಷ್ಟಗೊಂಡಿದ್ದು, ತದನಂತರ ನಷ್ಟ ಉಂಟಾದ ಕಾಮಗಾರಿಗಳ ಬಗ್ಗೆ ಮಾನ್ಯ ಸಚಿವರ ಆದೇಶದಂತೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಸದರಿ ಕಾಮಗಾರಿಗಳು ಕೈಗೊಳ್ಳಬೇಕೆಂದು ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ’ಸೋಜಾ ರವರು ಒತ್ತಾಯಿಸಿದರು. ಮಾನ್ಯ ಎನ್.ಎಸ್.ಬೋಸರಾಜು ರವರು, ಮಾನ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಬೆಂಗಳೂರು ಕಛೇರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಜಪ್ಪಿನಮೊಗರು, ಉರ್ವ, ದೇರೆಬೈಲು, ಪಾಂಡೇಶ್ವರ, ಕಂಕನಾಡಿ ಮುಂತಾದ ವಾರ್ಡ್‌ಗಳಲ್ಲಿ ಅನೇಕ ಸಾರ್ವಜನಿಕ ಕಾಲುವೆಗಳ ತಡೆಗೋಡೆಗಳು ಕುಸಿತಗೊಂಡಿದ್ದು, ತುರ್ತಾಗಿ ಕಾಮಗಾರಿ ಆಗಬೇಕಾಗಿರುವುದರಿಂದ ಈ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾ ರವರು ತಿಳಿಸಿದ್ದಾರೆ.

