ಉಡುಪಿ : ತುಳುನಾಡ ರಕ್ಷಣಾ ವೇದಿಕೆ (ರಿ.) ಬ್ರಹ್ಮಾವರ ತಾಲೂಕು ಘಟಕ, ಉಡುಪಿ ವತಿಯಿಂದ ದಿನಾಂಕ : 10-07-2026, ಶುಕ್ರವಾರದಂದು ಆರೂರು ಗ್ರಾಮದ ಅಡ್ಜಿಲು ಭಾಗದಲ್ಲಿ ತೀವ್ರ ವಿದ್ಯುತ್ ಓವರ್‌ಲೋಡ್ ಹಾಗೂ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಕಡಿತದ ಸಮಸ್ಯೆಯನ್ನು ನಿವಾರಿಸಲು ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಹಾಗೂ ಹಳೆಯ ವಿದ್ಯುತ್ ತಂತಿಗಳ ಬದಲಿಗೆ ಹೊಸ ತಂತಿಗಳನ್ನು ಅಳವಡಿಸುವ ಕುರಿತು ಮನವಿ ನೀಡಲಾಯಿತು.
ಆರೂರು ಗ್ರಾಮದ ಅಡ್ಜಿಲು ಭಾಗದಲ್ಲಿ ಸುಮಾರು 763 ಕುಟುಂಬಗಳು ವಾಸಿಸುತ್ತಿದ್ದು, ಒಟ್ಟು 3,609 ಜನಸಂಖ್ಯೆ ಇದ್ದು . ಗ್ರಾಮದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಿದ್ಯುತ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಇರುವ ಒಂದೇ ಟ್ರಾನ್ಸ್‌ಫಾರ್ಮರ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಟ್ರಾನ್ಸ್‌ಫಾರ್ಮರ್ ಮೇಲೆ ಅತಿಯಾದ ವಿದ್ಯುತ್ ಹೊರೆ (ಓವರ್‌ಲೋಡ್) ಉಂಟಾಗಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದೆ.

ಈ ನಿರಂತರ ವಿದ್ಯುತ್ ವ್ಯತ್ಯಯದಿಂದ ಗ್ರಾಮದ ಬಹುತೇಕ ಭಾಗಗಳು ಕತ್ತಲೆಯಲ್ಲಿ ಮುಳುಗುವಂತಾಗಿದ್ದು, ಮನೆಗಳಲ್ಲಿ ಬಳಕೆಯಾಗುವ ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ವಿದ್ಯುತ್ ಏರಿಳಿತದಿಂದ ಹಾನಿಗೊಳಗಾಗುತ್ತಿವೆ. ಜೊತೆಗೆ ಕುಡಿಯುವ ನೀರಿನ ಸರಬರಾಜು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಸಾರ್ವಜನಿಕರ ದೈನಂದಿನ ಜೀವನಕ್ಕೂ ತೀವ್ರ ತೊಂದರೆ ಉಂಟಾಗುತ್ತಿದೆ.
ಗ್ರಾಮದ ಪ್ರಸ್ತುತ ಜನಸಂಖ್ಯೆ ಹಾಗೂ ಮನೆಗಳ ಸಂಖ್ಯೆಯನ್ನು ಪರಿಗಣಿಸಿದರೆ, ಒಂದೇ ಟ್ರಾನ್ಸ್‌ಫಾರ್ಮರ್ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಹಲವು ವರ್ಷಗಳ ಹಿಂದೆ ಅಳವಡಿಸಲಾದ ವಿದ್ಯುತ್ ತಂತಿಗಳು ಹಳೆಯದಾಗಿದ್ದು, ಅವುಗಳ ಬದಲಿಗೆ ಹೊಸ ಗುಣಮಟ್ಟದ ತಂತಿಗಳನ್ನು ಅಳವಡಿಸುವ ಅಗತ್ಯವೂ ಇದೆ.
ಆದ್ದರಿಂದ,ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಆರೂರು ಗ್ರಾಮದ ಅಡ್ಜಿಲು ಭಾಗಕ್ಕೆ ತುರ್ತಾಗಿ ಒಂದು ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಘಟಕವನ್ನು ಮಂಜೂರು ಮಾಡಿ ಅಳವಡಿಸುವುದರೊಂದಿಗೆ, ಹಳೆಯ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.) ಬ್ರಹ್ಮಾವರ ತಾಲೂಕು ಘಟಕ ವಿನಂತಿಸಿದೆ.
ಇದರಿಂದ ಗ್ರಾಮದ ಜನರು ದೀರ್ಘಕಾಲದಿಂದ ಎದುರಿಸುತ್ತಿರುವ ವಿದ್ಯುತ್ ಕಡಿತ ಹಾಗೂ ಕಡಿಮೆ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈ ಮನವಿಗೆ ಶೀಘ್ರವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸುವಿರೆಂದು ಸಮಸ್ತ ಆರೂರು–ಅಡ್ಜಿಲು ಗ್ರಾಮಸ್ಥರ ಪರವಾಗಿ ಸಕಾರಾತ್ಮಕವಾಗಿ ಸ್ಪಂದಿಸುವಿರಿ ಎಂದು ಭಾವಿಸುತ್ತಾ ತುಳುನಾಡ ರಕ್ಷಣಾ ವೇದಿಕೆ (ರಿ.) ಬ್ರಹ್ಮಾವರ ತಾಲೂಕು ಘಟಕ, ಇಂದು ಬೆಳಿಗ್ಗೆ 11, ಗಂಟೆ ಸಮಯಕ್ಕೆ ಸತೀಶ್ ಎಚ್ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ ) ಕಾರ್ಯ ಮತ್ತು ಪಾಲನ ಉಪವಿಭಾಗ, ಮೆಸ್ಕಾಂ ಬ್ರಹ್ಮಾವರ ಇವರಿಗೆ ಮನವಿಯನ್ನು ಸಲ್ಲಿಸಿ ಅತಿ ಶೀಘ್ರದಲ್ಲಿ ಈ ಕಾರ್ಯವನ್ನು ಮಾಡಿ ಕೊಡಬೇಕಾಗಿ ಸಂಪೂರ್ಣ ಆರೂರು ಅಡ್ಜಿಲು ಗ್ರಾಮಸ್ಥರ ಪರವಾಗಿ, ಈ ಮನವಿಯನ್ನು ನೀಡಲು ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ, ಜಿಲ್ಲಾಧ್ಯಕ್ಷರಾಗಿರುವ ಫ್ರಾಂಕಿ ಡಿಸೋಜಾ , ಹಾಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿರುವ ಸುರೇಂದ್ರ ಪೂಜಾರಿ , ಹಾಗೆ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾಗಿರುವ ಜಯ ಪೂಜರಿ ಸರ್, ಹಾಕಿ ಜಿಲ್ಲಾ ಮುಖಂಡರಾಗಿರುವ ಮನೋಜ್ ಮಾಯಾಡಿ, ಜಿಲ್ಲಾ ಸಂಘದ ಜೊತೆ ಕಾರ್ಯದರ್ಶಿಗಳಾಗಿರುವ ಕೃಷ್ಣ ಪೂಜಾರಿ ಮಾರ್ಪಳ್ಳಿ, ಬೈರಂಪಳ್ಳಿ ತಾಲೂಕು ಘಟಕದ ಅಧ್ಯಕ್ಷರಾಗಿರುವ ಕೃಷ್ಣಾನಂದ್ ನಾಯಕ್, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾಗಿರುವ ಶರತ್ ರಾಜ್ ಆರೂರು, ಉಪಾಧ್ಯಕ್ಷರಾಗಿರುವ ನಿತಿನ್ ಶೆಟ್ಟಿ ಪೇತ್ರಿ, ಸಂಘಟನಾ ಕಾರ್ಯದರ್ಶಿ ವಿಜಯ ನಾಯ್ಕ್, ಹಾಗೆ ಸದಸ್ಯರಾಗಿರುವ ಗೋಪಾಲ್ ನಾಯ್ಕ್, ರವಿ ಆರೂರು, ರಮೇಶ್, ಮಿಥುನ್ ನಾಯ್ಕ್ ಈ ಒಂದು ಸಂದರ್ಭ ಉಪಸ್ಥಿತರಿದ್ದರು.

