
ಜೈ ತುಲುನಾಡ್ (ರಿ.) ಬೆಂಗಳೂರು ಘಟಕದ ವಾರ್ಷಿಕ ಸಾಮಾನ್ಯ ಸಭೆ ಹಾಗೂ 2025-26 ನೇ ಸಾಲಿನ ಹೊಸ ಸಮಿತಿಯ ಪದಗ್ರಹಣ ಕಾರ್ಯಕ್ರಮ, ದಿನಾಂಕ 30 ಮಾರ್ಚ್ 2025ರ ಭಾನುವಾರ ಬೆಂಗಳೂರಿನ ಮೆಜೆಸ್ಟಿಕ್ ನ ಹತ್ತಿರ ಇರುವ ಸ್ವಾಗತ್ ಹೋಟೆಲ್ ನಲ್ಲಿ ಜರುಗಿತು.
ಕಾರ್ಯದರ್ಶಿಗಳಾದ ಅಕ್ಷಯ್ ಆಚಾರ್ಯ ವಾರ್ಷಿಕ ವರದಿ ಓದಿದರು. ಜೊತೆ ಖಜಾಂಚಿಗಳಾದ ಪ್ರಗತಿ ಎಸ್. ವಾರ್ಷಿಕ ಲೆಕ್ಕಪತ್ರ ಓದಿದರು. ಅಧ್ಯಕ್ಷರಾದ ಧನಂಜಯ ಆಚಾರ್ಯ ಅಧ್ಯಕ್ಷತೆಯ ಮಾತುಗಳನ್ನು ಹಂಚಿಕೊಂಡರು. ಅಧಿಕಾರ ವರ್ಗಾವಣೆಯ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದಲ್ಲಿ ಶ್ರೀ ನಿಶಿಲ್ ಶೆಟ್ಟಿ ಬೇಲಾಡಿ, ಶ್ರೀ ಶರತ್ ಕೊಡವೂರು, ಹಾಗೆಯೇ ಮಾಜಿ ಅಧ್ಯಕ್ಷರಾದ ಶ್ರೀ ಜಯಪ್ರಸಾದ್ ಕುಲಾಲ್ ತುಲುನಾಡ್ ಭಾಗವಹಿಸಿದ್ದರು. ಮೊದಲು 2024-25ನೇ ಸಾಲಿನ ಎಲ್ಲಾ ಪದಾಧಿಕಾರಿಗಳು ತನ್ನ ಅಧಿಕಾರದ ಅವಧಿಯ ಅನುಭವಗಳನ್ನು ಹಂಚಿಕೊಂಡರು. ತುಲು ಸಾಲು ಮತ್ತು ಬಾವುಟ ಕೊಡುವ ಮೂಲಕ 2025-26 ನೇ ಸಾಲಿನ ಹೊಸ ಸಮಿತಿಗೆ ಅಧಿಕಾರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಹೊಸ ಸಮಿತಿಯ ಅಧ್ಯಕ್ಷರಾಗಿ ಶ್ರೀ ನಿಧೀಶ್ ಶೆಟ್ಟಿ ಜೈ ತುಲುನಾಡ್ ಆಯ್ಕೆಯಾದರು. ಹಾಗೆಯೇ ಉಪಾಧ್ಯಕ್ಷ ರಾಗಿ ಶ್ರೀ ಯತೀಶ್ ಕುಮಾರ್ ಮುಂಡೋಡಿ, ಪ್ರಧಾನ ಕಾರ್ಯದರ್ಶಿ ಗಳಾಗಿ ಶ್ರೀ ರಂಜನ್ ಎಸ್. ವೈ ಬೆಳಾಲು, ಜೊತೆ ಕಾರ್ಯದರ್ಶಿಗಳಾಗಿ ಶ್ರೀ ವಿನಯ್ ಮಣಿಯಾನ ಹಾಗೂ ದಿಯಾ ಬೋಳಾರ್, ಖಜಾಂಚಿಗಳಾಗಿ ಶ್ರೀ ಅನುದೀಪ್ ಶೆಟ್ಟಿ ಎಲ್ಲೂರು, ಜೊತೆ ಖಜಾಂಚಿಗಳಾಗಿ ಮೇಘನಾ ಪೂಜಾರಿ ವಾಮಂಜೂರು, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಅಕ್ಷಯ್ ಆಚಾರ್ಯ ಬೇಲಾಡಿ, ಜೊತೆ ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಮನೋಜ್ ಪೂಜಾರಿ ಜಯಪುರ ಇವರುಗಳು ಆಯ್ಕೆಯಾದರು. ಹಾಗೆಯೇ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀ ಸುಧೀರ್ ದೇವಾಡಿಗ ಮುದ್ರಾಡಿ, ಚೈತ್ರಾ ಎನ್. ವರ್ಕಾಡಿ, ಪೂಜಾ ಬಂಗೇರ ಒಡಿಪು ಇವರು ಕೂಡ ಆಯ್ಕೆಯಾದರು. ಇನ್ನಷ್ಟು ಒಳ್ಳೆಯ ರೀತಿಯಲ್ಲಿ ನವೀನ ಹಾಗೂ ಸುಂದರ ಕಾರ್ಯಕ್ರಮಗಳನ್ನು ಈ ವರ್ಷ ನಮ್ಮ ಘಟಕದಿಂದ ಮಾಡುವ ಯೋಜನೆಗಳು ಇದೆ,ಹಾಗೆಯೇ ತುಲು ಲಿಪಿ ಭಾಷೆಗಾಗಿ ಇನ್ನು ಮುಂದೆಯೂ ಹೀಗೆಯೆ ಕೆಲಸ ಮಾಡಲು ನಿಮ್ಮೆಲ್ಲರ ಸಹಕಾರ ಬೇಕೆಂದು ಹೊಸ ಅಧ್ಯಕ್ಷರು ತಿಳಿಸಿದರು.

ಜೈ ತುಲುನಾಡ್(ರಿ.) ಸಂಘಟನೆ ತುಲು ಬಾಸೆ ಲಿಪಿ ಸಂಸ್ಕೃತಿಯ ಉಳಿವಿಗಾಗಿ ಪ್ರಯತ್ನಿಸುತ್ತಿರುವ ತುಲುನಾಡಿನ ಪ್ರತಿಷ್ಠಿತ ಸಂಘಟನೆಯಾಗಿದೆ. ತುಲು ಅಭಿಮಾನದ ಯುವಕರು ಕಟ್ಟಿದ ಸಂಘಟನೆ ಇವತ್ತಿಗೆ ತುಲು ಹೋರಾಟದ ಕ್ರಾಂತಿ ದೊಡ್ಡ ರೀತಿಯಲ್ಲಿ ಸದ್ದು ಮಾಡಲು ಕಾರಣವಾಗಿದೆ. ಇಂತಹ ಸಂಘಟನೆಯನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆಸುವ ಜವಾಬ್ದಾರಿ ಸಿಕ್ಕಿದ್ದು ನನ್ನ ಸೌಭಾಗ್ಯ.ತುಲು ಭಾಷೆ,ಲಿಪಿ, ಸಂಸ್ಕೃತಿಯ ಉಳಿಯುವಿಗಾಗಿ ಎಲ್ಲರ ಜೊತೆಗೂಡಿ ನನ್ನ ಶಕ್ತಿ ಮೀರಿ ಹೋರಾಟ ಮಾಡುತ್ತೇನೆ.
ಶ್ರೀ ನಿಧೀಶ್ ಶೆಟ್ಟಿ ತುಲುನಾಡ್.
ಅಧ್ಯಕ್ಷರು,ಜೈ ತುಲುನಾಡ್(ರಿ.) ಬೆಂಗಳೂರು.