ವರದಿ ರಾಯಿ ರಾಜ ಕುಮಾರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಘಟಕ, ಬಂಟ್ವಾಳ ತಿರುಮಲ ವೆಂಕಟರಮಣ ದೇವಾಲಯ, ಬಂಟ್ವಾಳ ಮಂಜುನಾಥೇಶ್ವರ ಭಜನಾ ಪರಿಷತ್ ಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ಭಜನೋತ್ಸವ 2026 ತಿರುಮಲ ವೆಂಕಟರಮಣ ದೇವಾಲಯದಲ್ಲಿ ನಡೆಯಲಿದೆ. ಜನವರಿ 17ರಂದು ಸಂಜೆ 5 ರಿಂದ ನಡೆಯಲಿರುವ , ಕುಣಿತ ಭಜನಾ ಮೆರವಣಿಗೆಯ ಕಾರ್ಯಕ್ರಮದಲ್ಲಿ ಸುಮಾರು 600 ಕ್ಕೂ ಅಧಿಕ ಭಜಕರ 25 ಭಜನಾ ಮಂಡಳಿಗಳು ಏಕಕಾಲದಲ್ಲಿ ಭಾಗವಹಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
.

