ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 18ನೇ ವರ್ಷದ ಜಪ್ಪಿನಮೊಗರು ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇದೇ ಅದಿತ್ಯವಾರ ಬೆಳಿಗ್ಗೆ 10:30ಕ್ಕೆ ಜಪ್ಪಿನಮೊಗರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಗಾಟನೆಯನ್ನು ಶ್ರೀ ಯೋಗಿಶ್ ಕುಮಾರ್ ಜಪ್ಪು ಅಧ್ಯಕ್ಷರು: ಗುರುವನ ಶ್ರೀ ದುರ್ಗಾ ಕ್ಷೇತ್ರ ಕಡೆಕಾರ್ ಜಪ್ಪಿನಮೊಗರು ಇವರು ದೀಪವನ್ನು ಪ್ರಜ್ವಲಿಸಿದರು. ಸಭಾಧ್ಯಕ್ಷತೆಯನ್ನು ನ್ಯಾಯವಾದಿಗಳಾದ ಶ್ರೀ ಮೋಹನ್ ದಾಸ್ ರೈ ಎಕ್ಕೂರು ವಹಿಸಿದ್ದರು. ಶ್ರೀಮತಿ ನಿಶ್ಮಿತಾ ಪವನ್ ಶೆಟ್ಟಿಯವರು ವಿನೂತನ ಶೈಲಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಲ| ರಾಜೇಶ್ ಶೆಟ್ಟಿ (ಶಬರಿ ಕ್ಯಾಟರರ್ಸ್ ಜಪ್ಪಿನಮೊಗರು), ಜಯಂತ್ ಜೆ. ಕೋಟ್ಯಾನ್ ಪಂಪ್‌ವೆಲ್ ಲ| ಉಮೇಶ್ ಅತಿಕಾರಿ ಅಧ್ಯಕ್ಷರು ಯಕ್ಷಸಿರಿ ಜಪ್ಪಿನಮೊಗರು, ಲ| ರವಿಕುಮಾರ್ (ಉದ್ಯಮಿ) ಅಧ್ಯಕ್ಷರು ಲಯನ್ಸ್ ಕ್ಲಬ್ ಬೆಂದೂರ್‌ವೆಲ್‌ರವರು ಉಪಸ್ಥಿರಿದ್ದರು.
ಈ ಕಾರ್ಯಕ್ರಮದಲ್ಲಿ (ಮಾಜ ಸೈನಿಕರಾದ ಶ್ರೀ ಸಂತೋಷ್ ಕುಲಾಲ್ ಹಾಗೂ ಶ್ರೀ ಶ್ರೀನಿವಾಸ್ ಕೆ. ಕೋಶಾಧಿಕಾರಿ: ನವಮಂಗಳೂರು ಬಂದರು ಬಳಕೆದಾರರ ಸಂಘ ಪಣಂಬೂರು. ಸ್ಪಂದನಾ ಮಂಗಳೂರು ಮಾಲಕರಾದ ನಾಗರಾಜ್ ಉರ್ವಾರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಮಾಜಿ ಕಾರ್ಫೋರೇಟರ್ ಹಾಗೂ ಸಮಿತಿಯ ಅಧ್ಯಕ್ಷರಾದ ಜೆ. ನಾಗೇಂದ್ರ ಕುಮಾರ್‌ರವರು ಪ್ರಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಶ್ರೀಮತಿ ಮಲ್ಲಿಕಾ ಭಾನುಪ್ರಕಾಶ್ ಬಜಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯವರಾದ ಸುಭಾಷ್ ವಿ. ಅಡಪ ರವರು ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಹರೀಶ್ ಶೆಟ್ಟಿ ತಾರ್ದೋಲ್ಯ ಧನ್ಯವಾದವಿತ್ತರು.

