ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಸೇವಾ ಯೋಜನೆಯ ಸಹಾಯಧನ ವಿತರಣೆ

0
177

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ (ರಿ.) ಸಿಟಿಗುಡ್ಡೆ, ಪುತ್ತೂರು, ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 62 ನೇ ಯೋಜನೆಯ ಒಂದು ದಿನದ ಸಹಾಯ ಧನವನ್ನು ಈ 63 ನೇ ಯೋಜನೆಯ ಜೊತೆ ಸೇರಿಸಿ ಜುಲೈ ತಿಂಗಳ ಸಹಾಯಧನವನ್ನು ಪೆರ್ಲದ ನಲ್ಕ ನಿವಾಸಿ ವಿಘ್ನೇಶ್ ಇವರ ಪತ್ನಿ ಯಶೋಧ ಇವರಿಗೆ ಕರುಳಿನ ಕಾಯಿಲೆಯ ಮದ್ದಿಗಾಗಿ 25,000 (ಇಪ್ಪತ್ತೈದು ಸಾವಿರ)ರೂ.ವನ್ನು ಸಹೃದಯಿ ದಾನಿಗಳಿಂದ ಸಂಗ್ರಹಿಸಿ ಈ ಬಡ ಕುಟುಂಬಕ್ಕೆ ದಿನಾಂಕ 10-08-2025ರಂದು ವಿತರಿಸಲಾಯಿತು.

ನಿವೃತ್ತ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಕಾಟುಕುಕ್ಕೆ.ಮತ್ತು ಡಾ. ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶಾಂತಾ ಪುತ್ತೂರುರವರ ಮೂಲಕ ಫಲಾನುಭವಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯಶೋಧರವರ ಮನೆಯವರು, ತಂಡದ ಅಧ್ಯಕ್ಷ ರು, ಕಾರ್ಯ ದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here