ಸಾವಯವ ಕೃಷಿಯಲ್ಲಿ ಸಾಧನೆಗೆ ಜಯಕರ್ ಶೇರಿಗಾರ್‌ಗೆ ‘Salute the Silent Star’ ಪ್ರಶಸ್ತಿ

0
14

ಪರ್ಕಳ : ಜೆಸಿಐ ಪರ್ಕಳದ ಪ್ರತಿಷ್ಠಿತ “Salute the Silent Star” ಪ್ರಶಸ್ತಿಯನ್ನು ಹಿರಿಯ ಸಾವಯವ ಕೃಷಿಕ ಜಯಕರ್ ಶೇರಿಗಾರ್ ಅವರಿಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕೇಂದ್ರ, ಪರ್ಕಳದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿಸಿ ಗೌರವಿಸಲಾಯಿತು.

ಸುಮಾರು 40 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರು ವರ್ಷಕ್ಕೆ ಮೂರು ಭತ್ತದ ಬೆಳೆಗಳೊಂದಿಗೆ ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದು, ಪರ್ಕಳ ಹಾಗೂ ಹರ್ಗ ಗ್ರಾಮದ ದೇವಸ್ಥಾನಗಳಲ್ಲಿ ಪಂಚವಾದ್ಯ ದೇವರ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಜೆಸಿಐ ಪರ್ಕಳ ಅಧ್ಯಕ್ಷ JFM ಭರತ್ ಕೆ. ಕುಲಾಲ್ ಅವರು ಮಾತನಾಡಿ, ಸಮಾಜದ ಮೌನ ಸಾಧಕರನ್ನು ಗುರುತಿಸಿ ಗೌರವಿಸುವುದು ಜೆಸಿಐ ಪರ್ಕಳದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜೆಸಿಐ ಪರ್ಕಳದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.