ಸಚ್ಚೇರಿಪೇಟೆ : ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಚ್ಚೇರಿಪೇಟೆಯಲ್ಲಿ ಆ.28ರಂದು ರಕ್ಷಾ ಬಂಧನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ನಿಟ್ಟೆಯ ಎನ್.ಆರ್.ಎ.ಎಂ. ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ವೆಂಕಟರಮಣ ಪ್ರಸಾದ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಕ್ಷಾ ಬಂಧನದ ಉದ್ದೇಶ ಮತ್ತು ಮಹತ್ವವನ್ನು ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದ ಅವರು, ಅಣ್ಣ-ತಂಗಿಯರ ಬಾಂಧವ್ಯ, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ರಕ್ಷಣೆಯ ಸಂಕೇತವಾಗಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. “ನಾವೆಲ್ಲರೂ ಒಂದೇ, ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ಸಂದೇಶವನ್ನು ರಕ್ಷಾ ಬಂಧನ ಸಾರುತ್ತದೆ ಎಂದು ತಿಳಿಸಿದರು.
ನಂತರ ವಿವಿಧ ವಿಧಿ-ವಿಧಾನಗಳೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ರಕ್ಷಾ ಬಂಧನ ಕಟ್ಟಲಾಯಿತು. ವಿದ್ಯಾರ್ಥಿಗಳು ಸಹೋದರತ್ವ, ಪ್ರೀತಿ ಮತ್ತು ಸೌಹಾರ್ದತೆಯ ಭಾವನೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಸುರೇಶ್ ಶೆಟ್ಟಿ, ಪೂರ್ವಾಧ್ಯಕ್ಷ ಲಯನ್ ಆನಂದ್ ಆಚಾರ್ಯ, ಸತೀಶ್ ಪ್ರಭು, ಸಂಸ್ಥೆಯ ಮುಖ್ಯೋಪಾಧ್ಯಾಯ ಗೌರವ್ ಆರ್.ಕೆ. ಹಾಗೂ ಲಯನ್ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗಾಗಿ ಅರವಿಂದ್ ಕಾಮತ್ ಅವರು ರಕ್ಷಾ ಬಂಧನದ ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿನಿ ಶಾನ್ವಿ ಎಸ್. ನಿರೂಪಿಸಿದರು. ಎಂ. ತಾನ್ಯ ಸ್ವಾಗತಿಸಿದರು ಹಾಗೂ ಸಾನ್ವಿ ವಿ. ವಂದನಾರ್ಪಣೆ ಸಲ್ಲಿಸಿದರು.
ಪರಸ್ಪರ ಪ್ರೀತಿ, ಸಹೋದರತ್ವ, ಒಗ್ಗಟ್ಟು ಮತ್ತು ಸೌಹಾರ್ದತೆಯ ಸಂದೇಶ ಸಾರಿದ ರಕ್ಷಾ ಬಂಧನ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.

