ಸಾಣೂರಿನಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ: ಮುದ್ದುಕೃಷ್ಣ ಸ್ಪರ್ಧೆ

0
5

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ದಿನಾಂಕ 6/9/26 ರಂದು ಸಾಣೂರು ಶಿವರಾಮ ರೈ ಕಲಾವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶೋಭಾ ಗಿರೀಶ್ ಶೆಟ್ಟಿ ಶಿಕ್ಷಕಿ, ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್, ಕಾರ್ಕಳ ನೆರವೇರಿಸಿ. ಶ್ರೀ ಕೃಷ್ಣನ ಜನ್ಮ ಮತ್ತು ಯಶೋದೆಯೊಂದಿಗೆ ಆಡಿದ ತುಂಟಾಟ, ವಿವಿಧ ವಿನೋದಾವಳಿಗಳ ಬಗ್ಗೆ ವಿವರಿಸುತ್ತ ಇಂದು ನಾವು ಶ್ರೀಕೃಷ್ಣನ ತುಂಟಾಟಗಳನ್ನು ನಮ್ಮ ಮಕ್ಕಳಲ್ಲಿ ಮುದ್ದು ಕೃಷ್ಣನಾಗಿ ಕಾಣುತ್ತಿದ್ದೇವೆ. ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಹುಮಾನ ವಿತರಣೆ ಜಾನ್ ಡಿ’ಸಿಲ್ವಾ ಅಧ್ಯಕ್ಷರು ಸಾಣೂರು ವ್ಯವಸಾಯ ಸಹಕಾರಿ ಸೇವಾ ಸಂಘ ನಿ. ಇವರ ಅಧ್ಯಕ್ಷತೆಯಲ್ಲಿ ಹಾಗೂ ನಾಗೇಂದ್ರ ಶೆಟ್ಟಿಗಾರ್ ಇವರ ಉಪಸ್ಥಿತಿಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಮಂಡಲದ ಮಾಜಿ ಅಧ್ಯಕ್ಷರುಗಳಾದ ರಾಘು ಪೂಜಾರಿ, ದೇವಾನಂದ ಶೆಟ್ಟಿ, ಪ್ರಕಾಶ್ ಮಡಿವಾಳ, ಮಹೇಶ್ ಕುಮಾರ್, ಜಗದೀಶ್ ಕುಮಾರ್, ಶಂಕರ್ ಶೆಟ್ಟಿ, ಪ್ರಸಾದ್ ಪೂಜಾರಿ, ಗಣೇಶ್ ನಾಯಕ್ ಹಿರಿಯರಾದ ರಾಮದಾಸ್ ಭಟ್, ಪುರುಷೋತ್ತಮ್ ಗೌಡ ಮಂಡಲದ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ಕಾರ್ಯದರ್ಶಿ ರಾಜೇಶ್ ಜೊತೆ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ ಕ್ರೀಡಾ ಕಾರ್ಯದರ್ಶಿ ಅನಿಲ್ ಕೋಟ್ಯಾನ್ ವಿದ್ಯಾನಂದ ಕೋಟ್ಯಾನ್ ಸದಸ್ಯರುಗಳಾದ ಹರೀಶ್ ರಾವ್, ಸುನೀಲ್ ಕುಲಾಲ್, ಪ್ರಭಾಕರ್ ಶೆಟ್ಟಿ, ದಿನೇಶ್ ಶೆಟ್ಟಿಗಾರ್ , ಪ್ರವೀಣ್ ಶೆಟ್ಟಿ, ಚಂದ್ರಹಾಸ್ ಪೂಜಾರಿ, ಜಯನ್ ಶೆಟ್ಟಿ, ಸೀತಾರಾಮ್,ಸುದರ್ಶನ್ ನಾಯ್ಕ್ ಉಪಸ್ಥಿತರಿದ್ದರು.

ಪ್ರಕಾಶ್ ರಾವ್ ಹಾಗೂ ಮುರಳಿದರ್ ಸುವರ್ಣ ಬಹುಮಾನದ ವಿವರಗಳನ್ನು ವಾಚಿಸಿದರು. ಜೊತೆ ಕಾರ್ಯದರ್ಶಿ ಪ್ರಮಿತ್ ಸುವರ್ಣ ವಂದಿಸಿದರು. ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

1 ರಿಂದ 3 ವರ್ಷ ಮತ್ತು 3 ರಿಂದ 6 ವರ್ಷದ ಎರಡು ವಿಭಾಗದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಸುಮಾರು 42 ಮಕ್ಕಳು ಭಾಗವಹಿಸಿ, 1 ರಿಂದ 3 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಲಹರಿ.ಎಂ. ದ್ವಿತೀಯ ಅವಿನ್.ಎ. ಬೋಳಾರ್ ಹಾಗೂ 3 ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಪ್ರಥಮ ಚಾರಿತ್ರ್ಯ ದ್ವಿತೀಯ ಮೈನವಿ ಇವರು ಪಡೆದುಕೊಂಡರು.