ಜುಲೈ 15 :ಪುಣೆಯಲ್ಲಿ ಶ್ರೀ ಸಿದ್ದಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಕುಂದಾಪುರ ಇವರಿಂದ ಯಕ್ಷಗಾನ ಬಯಲಾಟ

0
7

ಪುಣೆ ::ಶ್ರೀ ಸಿದ್ದಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಟ್ಟಿಯಂಗಡಿ 2026 ರ ಮಳೆಗಾಲದ ತಿರುಗಾಟ ಮೇಳ ಬಡಗುತಿಟ್ಟಿನ ಯಕ್ಷಗಾನ ಮೇಳ ಪ್ರತಿ ವರ್ಷದಂತೆ ಈ ಬಾರಿಯೂ ನಡೆಯಲಿದೆ..ಆ ಪ್ರಯುಕ್ತ 15/07/2026 ರಂದು ಪುಣೆ ಆಕ್ರೋಡಿಯ ಖಂಡೊಬಾ ದೇವಸ್ಥಾನ ಪಿಂಪ್ರಿ, ಚಿಂಚ್ವಾಡ್ ಇಲ್ಲಿ ಸಂಜೆ 5 ಗಂಟೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷಕವಿ ಬೇಳೂರು ವಿಷ್ಣುಮೂರ್ತಿ ನಾಯಕ್ ವಿರಚಿತ ಸಿರಿ ಸಿಂಗಾರಿ ಯಕ್ಷಗಾನ ಬಯಲಾಟ ನಡೆಯಲ್ಲಿದ್ದು ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಲ್ಲಿ ಭಾಗವಹಿಸಬೇಕಾಗಿ ಶ್ರೀ ರಾಜೇಶ್ ಶೆಟ್ಟಿ, ಗಿರಿಜಾ ಹೋಟೆಲ್,ಆಕ್ರೋಡಿ ಹಾಗೂ ಶ್ರೀ ಸಂತೋಷ್ ಶೆಟ್ಟಿ ಪೆರ್ಡೂರು ಪ್ರಕಟಣೆಯಲ್ಲಿ ತಿಳಿಸಿರುವರು.

LEAVE A REPLY

Please enter your comment!
Please enter your name here