ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು, ಮುಂಬಯಿ: 18ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0
8

ಮುಂಬಯಿ :ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು, ಮುಂಬಯಿ ಇವರ18ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ, ಜುಲೈ 12 ರಂದು ಗೋರೆಗಾಂ ಪೂರ್ವದ ಪ್ರಜ್ಞ ಶಾಲೆಯಲ್ಲಿ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಡಿ ಮೂಲ್ಯ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಪೂಜಾ ಕಾರ್ಯ ಯಶಸ್ವಿಯಾಗಿ ನಡೆಯುವಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ನುಡಿದರು. ಸಂಚಾಲಕರಾದ ಕೃಷ್ಣ ಎಸ್ ಮೂಲ್ಯ ನಾಲಾಸೋಪಾರ ಸ್ವಾಗತಿಸಿದರು.
, ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದಿನೇಶ್ ಮೂಲ್ಯ ಅಂಧೇರಿ,ಕಾರ್ಯದರ್ಶಿ ದಿನೇಶ್ ಬಂಗೇರ ಖಾರ್‌ದಾಂಡ, ಜೂತೆ ಕಾರ್ಯದರ್ಶಿಗಳಾದ ಲೋಕೇಶ್ ಸಾಲ್ಯಾನ್ ಗೋರೆಗಾಂವ್,ಸದಾಶಿವ ಮೂಲ್ಯ, ವಿರಾರ್,ಜೊತೆ ಕೋಶಾಧಿಕಾರಿಗಳಾದ ವಿಶ್ವನಾಥ ಕುಂದರ್ ಅಂಧೇರಿ, ಶಶಿಕಾಂತ್ ಮೂಲ್ಯ ವಿರಾರ್, ಸಲಹೆಗಾರರಾದ,ರುಕ್ಕಿಣಿ ಯಶೋಧರ್ ಸಾಲ್ಯಾನ್ ಸಾಕಿನಾಕ , ಸರೋಜಾ ಎಚ್. ಮೂಲ್ಯ ಅಂಧೇರಿ,ಅರ್ಚನಾ ಎಸ್. ಕುಲಾಲ್ ವಸಾಯಿ, ನಳಿನಿ ಎನ್. ಬಂಜನ್ ವಿರಾರ್, ಕೇಶವ್ ಬಂಜನ್ ಜೋಗೇಶ್ವರಿ, ಜ್ಯೋತಿ ಡಿ ಸಾಲ್ಯಾನ್ ಗೊರೆಗಾಂವ್, ದಿವ್ಯಾ ಎಲ್ ಸಾಲ್ಯಾನ್ ಗೋರೆಗಾಂವ್, ಮತ್ತಿತರರು ಉಪಸ್ಥಿತರಿದ್ದರು,
ಈ ವರ್ಷ ದ 18ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಗಸ್ಟ್ 30, ಬೆಳಿಗ್ಗೆ 8.00ರಿಂದ ಸಂಜೆ 4.30ರ ವರೆಗೆ , ವಿಲೇಪಾರ್ಲೆ ಪೂರ್ವದ ಗೋಮಂತಕ್ ಚೌಕ್,ಮಾಲ್‌ವಿಯ ರಸ್ತೆ ಗೋಮಂತಕ್ ಸೇವಾ ಸಂಘದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು,

LEAVE A REPLY

Please enter your comment!
Please enter your name here