ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ ಮತ್ತು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಆಶ್ರಯದಲ್ಲಿ 2025 ಜೂನ್ 8 ಅಪರಾಹ್ನ 3 ರಿಂದ ಕನ್ನಡ ಭವನ ಸಭಾಂಗಣದಲ್ಲಿ ಕಯ್ಯಾರರ ಭಾವ ಚಿತ್ರಕ್ಕೆ ಹಾರಾರ್ಪಣೆ ಮೂಲಕ ಕಾರ್ಯಕ್ರಮ ಶುಭಾರಂಭಗೊಳ್ಳಲಿದೆ. ಕನ್ನಡ ಭವನ ರೂವಾರಿಗಳಾದ ಡಾ| ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿಗಳು ಹಾರಾರ್ಪಣೆಗೈದು ಕಾರ್ಯಕ್ರಮ ಚಾಲನೆಗೊಳಿಸುವರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. “ಗಡಿನಾಡ ಚೇತನ ಪ್ರಶಸ್ತಿ ಪುರಸೃತ ಕವಿ ಕಯ್ಯಾರರ ಆಪ್ತ ಶಿಷ್ಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ನುಡಿನಮನ ಅರ್ಪಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಉಪಸ್ಥಿತಿಯಲ್ಲಿ ವಕೀಲ ಸತ್ಯನಾರಾಯಣ ತಂತ್ರಿ, ದ.ಕ. ಜಿಲ್ಲಾ ಕನ್ನಡ ಭವನ ಅಧ್ಯಕ್ಷರಾದ ಶ್ರೀಮತಿ ರೇಖಾ ಸುಧೇಶ್ ರಾವ್, ದ.ಕ. ಜಿಲ್ಲಾ ಕನ್ನಡ ಭವನ ಕಾರ್ಯಾಧ್ಯಕ್ಷರಾದ ಉಮೇಶ್ ರಾವ್ ಕುಂಬಳೆ, ಕನ್ನಡ ಭವನದ ಗೌರವಾಧ್ಯಕ್ಷರಾದ ಪ್ರದೀಪ್ ಬೇಕಲ್ ಇರುವರು. ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸುವರು.
ಈ ಕಾರ್ಯಕ್ರಮದಲ್ಲಿ ಸಾಹಿತಿ ಡಾ| ರಮಾನಂದ ಬನಾರಿ, ಸಾಹಿತಿ ಡಾ| ಶಿವಾನಂದ ಬೇಕಲ್, ಸಾಹಿತಿ ಡಾ| ವಸಂತ್ ಕುಮಾರ್ ಪೆರ್ಲ, ಸಾಹಿತಿ ಡಾ| ಸದಾನಂದ ಪೆರ್ಲ ಇವರುಗಳಿಗೆ ” ನಾಡೋಜ ಡಾ| ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ-2025“ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ “ಕಯ್ಯಾರ ಕವಿಗೋಷ್ಠಿ-ಕಯ್ಯಾರ ಗಾಯನ ನಡೆಯಲಿರುವುದು. ಪರಿಷತ್ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶಾರದಾ ಮೊಳೆಯಾರ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಪರಿಷತ್ ಗೌರವಾಧ್ಯಕ್ಷರಾದ ವಿ.ಬಿ. ಕುಳಮರ್ವ ಪರಿಷತ್ ಉಪಾಧ್ಯಕ್ಷರಾದ ನರಸಿಂಹ ಭಟ್ ಏತಡ್ಕ, ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲ್ ಉಪಸ್ಥಿತರಿರುವರು.
ಕವಿಗೋಷ್ಠಿಯಲ್ಲಿ ಚಿತ್ರಕಲಾ ಆಚಾರ್ಯ ಸೂರಂಬೈಲ್, ರೇಖಾ ಸುಧೇಶ್ ರಾವ್, ಗಾಯತ್ರಿ ಪಳ್ಳತ್ತಡ್ಕ, ಮೋಹನ್‌ದಾಸ್ ಆನೆಪಲ್ಲಡ್ಕ(ಆಕರ್ಷಣೆ) ಹಿಮಜ ಚೆನ್ನರಾಯಪಟ್ಟಣ, ಪ್ರಣತಿ ಎನ್. ಪುದುಕೋಳಿ, ಮಾಲತಿ ಬೆಂಗಳೂರು, ಉಷಾ ಟೀಚರ್ ಕೋಟೆಕಣಿ, ಆಶಾ ರಾಧಾಕೃಷ್ಣ ಅಣಂಗೂರು, ಉಷಾ ಕಿರಣ್ ಅಣಂಗೂರು, ರೇಖಾ ರೋಶನ್ ಅಣಂಗೂರು, ಸುಭಾಷಿಣಿಚಂದ್ರ ಕನ್ನಟಿಪ್ಪಾರೆ, ಗಿರೀಶ್ ಪಿ.ಎಂ. ಚಿತ್ತಾರಿ, ಉಮಾ ಕಮಲಾಕ್ಷ ಬೀರಂತಬೈಲ್, ನರಸಿಂಹ ಭಟ್ ಏತಡ್ಕ, ಸುಜಿತ್ ಬೇಕೂರು, ಸುಶೀಲ ಕೆ. ಪದ್ಯಾಣ ನೀರ್ಚಾಲು, ಶಶಿಕಲಾ ಟೀಚರ್ ಕುಂಬಳೆ ಮುಂತಾದವರು ಕವನ ವಾಚಿಸುವರು. ಖ್ಯಾತ ಗಾಯಕ ಜಯಾನಂದ ಕುಮಾರ್ ಹೊಸದುರ್ಗ, ಪುನೀತ್ ಗಾನರತ್ನ ಸೀಸನ್ 3ರಲ್ಲಿ ಪ್ರಥಮ ಸ್ಥಾನ ಪಡೆದ ಶ್ರೇಯಾಕೃಷ್ಣ ಮಂಗಳೂರು, ಮುರಳಿಕೃಷ್ಣ ನೀರ್ಚಾಲ್, ಸುಭಾಷಿಣಿಚಂದ್ರ ಕನ್ನಟಿಪ್ಪಾರೆ, ಖ್ಯಾತ ನಿರೂಪಕ ವೀಜಿ ಕಾಸರಗೋಡು ನಿರ್ವಹಣೆಯಲ್ಲಿರುವರು, ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ ಗೌರವಾಧ್ಯಕ್ಷರಾದ ಪ್ರದೀಪ್ ಬೇಕಲ್ ಧನ್ಯವಾದ ಸಮರ್ಪಣೆ ಗೈಯುವರು ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ| ವಾಮನ್ ರಾವ್ ಬೇಕಲ್ ಹಾಗೂ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ವಿರಾಜ್ ಅಡೂರು ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.