ಕೆ.ಕೆ. ಫೌಂಡೇಷನ್ ವತಿಯಿಂದ ಸಾಧಕರಿಗೆ ‘ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

0
7

ದಾವಣಗೆರೆ : ಬೆಳಗಾವಿಯ ಕವಿತ್ತ ಕರ್ಮಮಣಿ ಫೌಂಡೇಷನ್ ಆಶ್ರಯದಲ್ಲಿ ‘ಕರ್ನಾಟಕ ರಾಜ್ಯೋತ್ಸವ’ದ ಪ್ರಯುಕ್ತ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಈ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ / ಸಲ್ಲಿಸಿರುವ ಪ್ರತಿಭಾನ್ವಿತ ಸಾಧಕರಿಗೆ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ರಮವಾಗಿ ‘ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ”, “ತಾಯ್ನುಡಿ ಸೇವಾರತ್ನ ಪುರಸ್ಕಾರ”, “ತಾಯ್ನುಡಿ ಪ್ರತಿಭಾ ಪುರಸ್ಕಾರ”ಗಳನ್ನು 2026ನೇ ನವೆಂಬರ್ 29 ರ ರವಿವಾರದಂದು ವರ್ಚುವಲ್ ಸಮಾರಂಭವನ್ನು ಆಯೋಜಿಸಿ ಗೌರವ ಪೂರ್ವಕವಾಗಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕವಿತ್ತ ಕರ್ಮಮಣಿ ಫೌಂಡೇಷನ್’ನ ಅಧ್ಯಕ್ಷರಾದ ಎಲ್.ಹೆಚ್. ಪೆಂಡಾರಿ ತಿಳಿಸಿದ್ದಾರೆ.

ಪ್ರತಿಭಾನ್ವಿತ ಸಾಧಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನವೆಂಬರ್ 20ನೇ ದಿನಾಂಕದೊಳಗೆ ಸಂಸ್ಥೆಯ ಅಧ್ಯಕ್ಷರ 9743867298 ಈ ವಾಟ್ಸಾಪ್ ನಂಬರಿಗೆ ಸಂಪರ್ಕಿಸಿ ಸಂಕ್ಷಿಪ್ತ ಪರಿಚಯವನ್ನು ಕಳಹಿಸುವ ಮೂಲಕ ಸಮಾರಂಭದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ವೇದಿಕೆಯ ಗೌರವ ಸಲಹೆಗಾರರಾದ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.