ಸುಳ್ಯದಲ್ಲಿ ಜ. 3ರಂದು ಮಾಸ್ಟರ್ ಸಿಂಗಿಂಗ್ ಇವೆಂಟ್: ಗಾಯಕರಿಂದ ಹೆಸರು ಆಹ್ವಾನ

0
15

ಸುಳ್ಯ: ಹೊಸ ವರ್ಷದ ಪ್ರಯುಕ್ತ ಜನವರಿ 3ರಂದು ಭಾನುವಾರ ಸುಳ್ಯದಲ್ಲಿ ಮಾಸ್ಟರ್ ಸಿಂಗಿಂಗ್ ಇವೆಂಟ್ ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಹಾಡಲು ಆಸಕ್ತಿ ಹೊಂದಿರುವ ಗಾಯಕ-ಗಾಯಕಿಯರಿಂದ ಹೆಸರುಗಳನ್ನು ಆಹ್ವಾನಿಸಲಾಗಿದೆ.

ಸಂಗೀತಾಸಕ್ತರಿಗೆ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶವಾಗಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಗಾಯಕರು ಹಾಗೂ ಗಾಯಕಿಯರು ತಮ್ಮ ಹೆಸರುಗಳನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ.

ಹಾಡುವ ಆಸಕ್ತಿ ಮತ್ತು ಪ್ರತಿಭೆ ಹೊಂದಿರುವ ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಲು ಆಯೋಜಕರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಸಂಪರ್ಕ ಸಂಖ್ಯೆ 8217096483