ಕಾಡುಹೊಳೆ ಶ್ರೀ ಗುರುದತ್ತಾತ್ರೇಯ ಸೇವಾ ಸಮಿತಿ ವತಿಯಿಂದ ಎಸ್‌ಎಸ್‌ಎಲ್‌ಸಿ , ಪಿಯುಸಿ ಯಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

0
5

ಕಾರ್ಕಳ : ಶ್ರೀ ಗುರುದತ್ತಾತ್ರೇಯ ಸೇವಾ ಸಮಿತಿ (ರಿ,) ಕಾಡುಹೊಳೆ ಇದರ ವತಿಯಿಂದ ಈ ಸಾಲಿನ SSLC ಹಾಗೂ ದ್ವಿತೀಯ PUC ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕಗಳಿಸಿ ಸಾಧನೆಗೈದ ಕಾಡುಹೊಳೆ ವಾರ್ಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜೂ.28 ರಂದು ಭಾನುವಾರ ಕಾಡುಹೊಳೆ ದತ್ತಮಂದಿರದ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ದತ್ತ ಮಂದಿರದ ಹುಣ್ಣಿಮೆ ಪೂಜೆಯಲ್ಲಿ ಭಾಗವಹಿಸಿ ಸನ್ಮಾನಿತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿ ಕಾಡುಹೊಳೆ ಭೂತಮಾರು ಸತೀಶ್ ಶೆಟ್ಟಿ, ಮುದ್ರಾಡಿ ಅನುದಾನಿತ ಪ್ರೌಢಶಾಲಾ ಶಿಕ್ಷಕ ಮಹೇಶ್ ನಾಯ್ಕ್, ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ರಾವ್ ಕಾಡುಹೊಳೆ, ಜ್ಯೋತಿ ಪ್ರೌಢಶಾಲಾ ಶಿಕ್ಷಕ ಜನಾರ್ದನ ನಾಯ್ಕ್, ಮರಾಠಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸತೀಶ್ ನಾಯ್ಕ್, ದತ್ತಾತ್ರೇಯ ಮಹಿಳಾ ಭಜನಾ ಮಂಡಳಿ ಗೌರವಾಧ್ಯಕ್ಷೆ ಸುಗಂಧಿ ಹೆಗ್ಡೆ ಉಪಸ್ಥಿತರಿದ್ದರು. ದತ್ತಾತ್ರೇಯ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here