ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಜನುಮದಿನದ ಶತಮಾನೋತ್ಸವ ಸಂಭ್ರಮಕ್ಕೆ ಕಲಾಕುಂಚದಿಂದ ಅಭಿನಂದನೆ, ಸನ್ಮಾನ

0
14

ದಾವಣಗೆರೆ : ದಾವಣಗೆರೆಯ ಐತಿಹಾಸಿಕ ಪರಂಪರೆಯ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ನ ಅಧ್ಯಕ್ಷರಾದ ಹಿರಿಯ ಚೇತನ, ಆಧುನಿಕ ಭೀಷ್ಮ ಎಂದೇ ಹೆಸರು ವಾಸಿಯಾದ ಚನ್ನಗಿರಿ ವಿರೂಪಾಕ್ಷಪ್ಪರವರು 99ನೇ ವರ್ಷ ಮುಗಿದು 100ನೇ ವರ್ಷಕ್ಕೆ ಕಾಲಿಟ್ಟ ಇವರಿಗೆ ಅಭಿಮಾನದಿಂದ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಜನುಮದಿನದ ಶತಮಾನೋತ್ಸವ ಸಂಭ್ರಮಕ್ಕೆ ಸನ್ಮಾನಿಸಿ ಗೌರವಿಸಲಾಯಿತು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ ಶೆಣೈಯವರು ತಿಳಿಸಿದರು.
1900ನೇ ಇಸವಿಯಲ್ಲಿ ಪ್ರಾರಂಭವಾದ ಈ ಟ್ರಸ್ಟ್ ಬಗ್ಗೆ ಶೆಣೈಯವರು ಮಾತನಾಡಿ, ದಾವಣಗೆರೆ ಜನತೆಯ ಸಮಯ ಪ್ರಜ್ಞೆ ಮೂಡಿಸಲು ಗಡಿಯಾರ ಗೋಪುರ ಸೃಷ್ಠಿಸಿ ಎಲ್ಲಾ ರೀತಿಯ ಸ್ವಯಂ ಸೇವೆ ಸಲ್ಲಿಸಿದ ಇತಿಹಾಸವನ್ನು ವ್ಯಕ್ತಪಡಿಸಿದರು.
ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಗೌರವ ಅಧ್ಯಕ್ಷರಾದ, ವಸಂತಿ ಮಂಜುನಾಥ್, ಕಲಾಕುಂಚ ಕೆ.ಬಿ. ಬಡಾವಣೆ ಶಾಖೆಯ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ, ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಭರತ್, ಕಲಾಕುಂಚ ಮಹಿಳಾ ವಿಭಾಗದ ಮೊದಲ ಅಧ್ಯಕ್ಷೆ ಶ್ರೀಮತಿ ಚಂದ್ರಶೇಖರ ಅಡಿಗ, ಕಲಾಕುಂಚ ಸದಸ್ಯರಾದ ಲಕ್ಷ್ಮೀ ಸುರೇಶ್, ಸ್ವರ್ಣಲತಾ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here