ಕಾಂಪ್ರಬೈಲು : ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ

0
17

ಬಂಟ್ವಾಳ : ಇಲ್ಲಿನ ಬಾಳ್ತಿಲ ಗ್ರಾಮದ ಮೊಗರ್ನಾಡು ಸಾವಿರ ಸೀಮೆಯಲ್ಲಿ ಕಾರಣಿಕ ಪ್ರಸಿದ್ಧ ಉಳ್ಳಾಲ್ತಿ ಅಮ್ಮ ಮತ್ತು ಅಜ್ವರ ದೈವಂಗಳು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಕೇಶವ ಸಪಲ್ಯ ಕಾಂಪ್ರಬೈಲು ಆಯ್ಕೆಯಾಗಿದ್ದಾರೆ.

ಉಳಿದಂತೆ ಸದಸ್ಯರಾಗಿ ಪ್ರೇಮನಾಥ ಶೆಟ್ಟಿ, ಚಿದಾನಂದ ಕಟ್ಟದಮೂಡು, ಚಂದ್ರಶೇಖರ ಮೂಲ್ಯ, ನಾರಾಯಣ ಪೂಜಾರಿ, ಜಗದೀಶ ಕಿನ್ಯನಬೈಲು, ಸಂದೇಶ ಶೆಟ್ಟಿ ಕಂಟಿಕ, ಉಷಾ ನಾಯ್ಕ ಗೋಳಿದಡಿ, ಹರಿಣಾಕ್ಷಿ ಕೋರ್ಯ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.