ಉಡುಪಿ ಶ್ರೀ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ, ಗೋಕರ್ಣ ಶ್ರೀಗಳ ಪಂಚಮ ಪುಣ್ಯತಿಥಿ ಆರಾಧನೆ

0
14

ಉಡುಪಿ : ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ ಹಾಗೂ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀ ಮಧ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪಂಚಮ ಪುಣ್ಯತಿಥಿ ಆರಾಧನೆ ಭಕ್ತಿ, ಶ್ರದ್ಧೆ ಹಾಗೂ ವೈದಿಕ ಸಂಪ್ರದಾಯದಂತೆ ಶನಿವಾರ ನೆರವೇರಿತು.

ಶ್ರೀ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ, ಸಾನಿಧ್ಯ ಹವನ, ವಿಶೇಷ ಅಲಂಕಾರ, ಅಷ್ಟಮಂಗಲ ನಿರೀಕ್ಷಣೆ, ಪಟ್ಟ ಕಾಣಿಕೆ ಹಾಗೂ ಸೇವಾದಾರರಿಗೆ ಪ್ರಸಾದ ವಿತರಣೆಯ ಕಾರ್ಯಕ್ರಮಗಳು ನಡೆದವು.

ಇದೇ ಸಂದರ್ಭದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀ ಮಧ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪಂಚಮ ಪುಣ್ಯತಿಥಿ ಆರಾಧನೆ ಆಚರಿಸಲಾಯಿತು. ಶ್ರೀ ದೇವರಿಗೆ ಮಹಾಪೂಜೆ ನೆರವೇರಿದ ಬಳಿಕ ಸಮಾರಾಧನೆ ನಡೆಯಿತು.

ದೇವಳದ ಅರ್ಚಕರಾದ ವಿನಾಯಕ ಭಟ್, ದಯಾಘನ್ ಭಟ್, ರವೀಂದ್ರ ಭಟ್, ಶರತ್ ಭಟ್ (ಮಲ್ಪೆ), ವಿದ್ವಾನ್ ಹರಿಪ್ರಸಾದ್ ಶರ್ಮ, ರಮೇಶ್ ಭಟ್, ದೀಪಕ್ ಭಟ್ ಹಾಗೂ ಲಕ್ಷ್ಮೀನಾರಾಯಣ ಭಟ್ ಅವರು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗಿರೀಶ್ ಭಟ್, ಸುರೇಶ್ ಭಟ್ ಹಾಗೂ ಪ್ರಸನ್ನ ಭಟ್ ಸಹಕರಿಸಿದರು.