ವಿವಿ ಕನ್ನಡ ವಿಭಾಗದಲ್ಲಿ ಕನಕ ಕಾಯಕ ದಾಸೋಹ ಯುಜಿಸಿ ನೆಟ್ : ಉಚಿತ ತರಬೇತಿ

0
7

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಕನಕ ಕಾಯಕ ದಾಸೋಹ ಉದ್ಯೋಗಮುಖಿ ಯೋಜನೆಯಡಿ ಯುಜಿಸಿಯ ನೆಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನೂಕೂಲವಾಗಲೆಂಬ ದೃಷ್ಟಿಯಿಂದ ಎರಡು ದಿನಗಳ ಉಚಿತ ಪರೀಕ್ಷಾ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದು( ಜೂ‌.22) ಮತ್ತು ನಾಳೆ (ಜೂ.23) ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ‌ ಈ ತರಬೇತಿ ಕಾರ್ಯಾಗಾರ ನಡೆಯಲಿದೆ. ಮೊದಲ ದಿನ ಪ್ರಥಮ ಪತ್ರಿಕೆ ಜನರಲ್ ಹಾಗೂ ದ್ವಿತೀಯ ದಿನ ಕನ್ನಡ ಐಚ್ಛಿಕ ಪತ್ರಿಕೆಯ ಕುರುತು ತಜ್ಞರು ತರಬೇತಿ ನೀಡಲಿದ್ದಾರೆ.

ಇಂದು ಬೆಳಗ್ಗೆ ಮಂಗಳೂರು ವಿವಿ ಕುಲಸಚಿವ ಪ್ರೊ.ಗಣೇಶ್ ಸಂಜೀವ್ ಉದ್ಘಾಟಿಸಲಿದ್ದಾರೆ. ಎಸ್ ವಿಪಿ ಕನ್ನಡ ವಿಭಾಗದ ಅಧ್ಯಕ್ಷರಾದ ಡಾ.ಆರ್ ನಾಗಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾ ನಿಕಾಯದ ಡೀನ್ ಪ್ರೊ.ಸೋಮಣ್ಣ ಹೊಂಗಳ್ಳಿ, ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಭಾಗವಹಿಸುವರು.

ಮಂಗಳೂರು ಸಹ್ಯಾದ್ರಿ ಇಂಜಿನಿಯರ್‌ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪದ್ಮನಾಭ ಬಿ., ಲೇಖಕಿ, ಉಪನ್ಯಾಸಕಿ ಡಾ.ಮೈತ್ರಿ ಭಟ್, ಅಂಬ್ಲಮೊಗರು ಶಾಲೆಯ ಶಿಕ್ಷಕ ಡಾ. ರಾಮಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here