‘ಕಂಗುಲು-ಕ‌ರಂಗೋಲು’ ಡಾಕ್ಯುಮೆಂಟರಿ ಸಿನಿಮಾ ಬಿಡುಗಡೆ

0
39

ಮಂಗಳೂರು : ಕಡಲ್ ಮಾಯಿಲ್ ಫಿಲ್ಡ್ ಮತ್ತು ಕಡಲ್ ಸ್ಟುಡಿಯೋಸ್, ಸಂದೇಶ ಫೌಂಡೇಶನ್ ಫಾರ್ ಕಲ್ಮರ್ ಅಂಡ್ ಎಜುಕೇಶನ್ (ರಿ) ಸಹಭಾಗಿತ್ವದಲ್ಲಿ ಕುಷ್ಕಬಚ್ಚಿರೆ ತುಳು ಕತೆ ಪುಸ್ತಕ ಹಾಗೂ ಸಾಗರ್ ಬನ್ನಂಜೆ ಮತ್ತು ಜಯಂತ್ ನಿಮ್ಮಡೆ ನಿರ್ದೇಶನ/ ನಿರ್ಮಾಣದ ‘ಕಂಗುಲು-ಕ‌ರಂಗೋಲು’ (ಮೂಲನಿವಾಸಿ ಆಚರಣೆ) ಡಾಕ್ಯುಮೆಂಟರಿ ಸಿನಿಮಾ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಸಂದೇಶ ಫೌಂಡೇಶನ್ ಫಾರ್ ಎಜುಕೇಶನ್ (ರಿ) ನಂತೂರು ಇದರ ಸಭಾಂಗಣದಲ್ಲಿ ಜು.19ರಂದು ನೆರವೇರಿತು. ಜನಪದ ಮತ್ತು ರಂಗಭೂಮಿ ಕಲಾವಿದ ಶೀನಾ ನಾಡೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸಂದೇಶ ಫೌಂಡೇಶನ್, ನಿರ್ದೇಶಕರಾದ ಫಾ.ರೋಶನ್ ರೋಸರಿಯೋ ಮತ್ತು ತುಳು ಸಾಹಿತಿ ಅತ್ರಾಡಿ ಅಮೃತಾ ವಿವಿಧ ಬರಹಗಾರರು ಬರೆದ ‘ಕುದಬಚ್ಚಿರೆ’ ತುಳು ಕಿರುಗತಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿ ಶುಭ ಹಾರೈಸಿದರು.

ಪ್ರದರ್ಶನಗೊಂಡ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಿದ ತುಳು ಜನಪದ ವಿದ್ವಾಂಸರಾದ ಡಾ.ವಾಸುದೇವ ಬೆಳ್ಳೆ, ಡಾ.ಯದುಪತಿ ಗೌಡ, ಕೆ.ಕೆ. ಪೇಜಾವರ, ಪಾಂಗಳ ಬಾಬು ಕೊರಗ ಮುಂತಾದವರು ವಿಶ್ಲೇಷಣಾ ಮಾತುಗಳನ್ನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲ ಕಾಲ ಚಿಂತನಾರ್ಹ ಸಂವಾದ ನಡೆಯಿತು.