ಕನ್ನಡ ಭವನ ಪ್ರದಾನ ಕಾರ್ಯದರ್ಶಿ ವಸಂತ ಕೆರೆಮನೆ -ದಿವ್ಯಶ್ರೀ ಹತ್ತನೇ ವಿವಾಹ ವಾರ್ಷಿಕೋತ್ಸವ : ಬೇಕಲ್ ಇಂಟರ್ನ್ಯಾಷನಲ್ ಬೀಚ್ ನಲ್ಲಿ 17-4-2026 ಸಂಜೆ 5ಕ್ಕೆ “ಕನ್ನಡ ಭವನ ಅಭಿಮಾನಿಗಳಿಂದ ಸವಿ ಸಂಭ್ರಮ “

0
6

ವಸಂತ್ ಕೆರೆಮನೆ ಕನ್ನಡ ಭವನ ಕೇಂದ್ರ ಸಮಿತಿ ಪ್ರದಾನ ಕಾರ್ಯದರ್ಶಿಯಾಗಿ,ಆಲ್ ಕೇರಳ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಯೂನಿಟ್ ಅಧ್ಯಕ್ಷರಾಗಿ, ಕೇರಳ ಕರ್ನಾಟಕ -ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾರ್ಯದರ್ಶಿ ಯಾಗಿ, ಹಲವು ಧಾರ್ಮಿಕ ಕೇಂದ್ರ ಗಳ ಪದಾಧಿಕಾರಿಯಾಗಿ, ಉತ್ತಮ ಸೇವಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಭವನದಲ್ಲಿ ಸರ್ವತೋಮುಖ ಕಾರ್ಯಗಳ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರೀಗೆ ಬೇಕಲ್ ಬೀಚ್ ನಲ್ಲಿ ಇಂದು ಸಂಜೆ ನಡೆಯುವ “ವಸಂತ್ ಕೆರೆಮನೆ -ಹತ್ತನೇ ಸವಿ ಸಂಭ್ರಮ “ಕಾರ್ಯಕ್ರಮದಲ್ಲಿ ವಸಂತ್ ದಿವ್ಯಶ್ರೀ ದಂಪತಿಗಳಿಗೆ ವಿಶೇಷ ಗೌರವಾರ್ಪಣೆ ನಡೆಯಲಿದೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕನ್ನಡ ಭವನ ಗೌರವ ಅಧ್ಯಕ್ಷರಾದ ಪ್ರದೀಪ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭವನದ ಪದಾಧಿಕಾರಿಗಳು, ಕಾರ್ಯಕರ್ತರು ಬೇಕಲ್ ಬೀಚ್ ಗೆ ಸಂಜೆ 5ಗಂಟೆಗೆ ಬಂದು ಭಾಗವಹಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.



LEAVE A REPLY

Please enter your comment!
Please enter your name here